ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪೈಲಟ್, ಗೆಹ್ಲೋಟ್ ವಿರುದ್ಧ ಕೇಸ್

ರಾಜಸ್ಥಾನದ ಆ್ಯಂಬ್ಯುಲೆನ್ಸ್ ಸೇವೆ ಹಗರಣ ಸಂಬಂಧ ಸಿಬಿಐ ಶುಕ್ರವಾರ ಕಾಂಗ್ರೆಸ್ ಮುಖಂಡರಾದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಸೇರಿ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದೆ...

ಅಶೋಕ್ ಗೆಹ್ಲೂಟ್ ಮತ್ತು ಸಚಿನ್ ಪೈಲಟ್ (ಸಂಗ್ರಹ ಚಿತ್ರ)
Srinivasa Murthy VN
Updated On : 29 Aug 2015, 1:26 am

ಜೈಪುರ: ರಾಜಸ್ಥಾನದ ಆ್ಯಂಬ್ಯುಲೆನ್ಸ್ ಸೇವೆ ಹಗರಣ ಸಂಬಂಧ ಸಿಬಿಐ ಶುಕ್ರವಾರ ಕಾಂಗ್ರೆಸ್ ಮುಖಂಡರಾದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಸೇರಿ ಹಲವರ ವಿರುದ್ಧ ಕ್ರಿಮಿನಲ್  ಪ್ರಕರಣ ದಾಖಲಿಸಿದೆ.

ಗೆಹ್ಲೋಟ್ ಸಿಎಂ ಆಗಿದ್ದಾಗ ಝಿಕಿತ್ಝಾ ಕಂಪನಿಯನ್ನು ಗ್ರಾಮೀಣದಲ್ಲಿ ಆ್ಯಂಬ್ಯುಲೆನ್ಸ್ ಸೇವೆ ಒದಗಿಸಲು ಆಯ್ಕೆ ಮಾಡಲಾಗಿತ್ತು. ಈ ಕಂಪನಿ ಆಗ ಕೇಂದ್ರ ಸಚಿವರಾಗಿದ್ದ ವಲಯಾರ್ ರವಿ  ನಡೆಸುತ್ತಿದ್ದರು. ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಇದರ ನಿರ್ದೇಶಕರಾಗಿದ್ದರು. ಸಿವಿಸಿ ಪ್ರಕಾರ ಈ ಕಂಪನಿ ಕೇವಲ ಕಾಗದದಲ್ಲಷ್ಟೇ ಅಸ್ತಿತ್ವದಲ್ಲಿತ್ತು. ಈ ಮೂಲಕ ರು.10  ಕೋಟಿ ಅವ್ಯವಹಾರ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ವಸುಂಧರಾ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments