ನವದೆಹಲಿ: ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದರೆ ಆರೋಪಿತ ವ್ಯಕ್ತಿಯು ಮಹಿಳೆಯಿಂದ ಮಾನನಷ್ಟ ಕೇಳಬಹುದು.
ದೆಹಲಿ ಕೋರ್ಟ್ ಇಂಥದ್ದೊಂದು ತೀರ್ಪು ಪ್ರಕಟಿಸಿದೆ. `ಮದುವೆಯಾಗುವುದಾಗಿ ಹೇಳಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ' ಎಂದು ಯುವತಿ ಸುಳ್ಳು ಆರೋಪ ಹೊರಿಸಿದರೆ, ಅಂಥ ಸಂದರ್ಭದಲ್ಲಿ ಯುವಕ ತನಗಾದ ಅವಮಾನ, ಮಾನಸಿಕ ಕಿರುಕುಳವನ್ನು ಪ್ರಸ್ತಾಪಿಸಿ ಅದೇ ಯುವತಿಯಿಂದ ಮಾನನಷ್ಟವನ್ನು ಕೇಳಬಹುದು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ದೆಹಲಿಯ ಮುಖರ್ಜಿ ನಗರದ ನಿವಾಸಿಯೊಬ್ಬರು ಯುವಕನೊಂದಿಗೆ ಸಮ್ಮತಿಯ ಸೆಕ್ಸ್ ನಡೆಸಿ, ಬಳಿಕ ಅತ್ಯಾಚಾರ ದೂರು ದಾಖಲಿಸಿದ್ದಳು. ಈ ಪ್ರಕರಣದಲ್ಲಿ ಆಕೆ ಸುಳ್ಳು ದೂರು ದಾಖಲಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಕೋರ್ಟ್ ಈ ತೀರ್ಪು ನೀಡಿದೆ.