ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಾರ್ಗ ಮಧ್ಯೆ ಪ್ರತ್ಯೇಕತಾವಾದಿಗಳ ಭದ್ರಕೋಟೆಯಲ್ಲಿ ಟೀ ಬ್ರೇಕ್ ತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸದಾ ಪ್ರತಿಭಟನೆ, ಗಲಭೆಗಳಿಗೆ ಸಾಕ್ಷಿಯಾಗುವ ಮೈಸುಮಾದ ರಸ್ತೆ ಬದಿಯ ಟೀ ಅಂಗಡಿಯೊಂದರಲ್ಲಿ ರಾಹುಲ್ ಸ್ನ್ಯಾಕ್ಸ್ ಸೇವಿಸಿದ್ದಾರೆ. ಶ್ರೀನಗರದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಳೆದ ವರ್ಷದ ಪ್ರವಾಹದಿಂದ ತಮ್ಮ ಪಕ್ಷದ ಕಚೇರಿಗೆ ಆದ ಹಾನಿಯನ್ನು ಪರಿಶೀಲಿಸಿದರು.