ಪಣಜಿ: ತನ್ನ ಪ್ರೇಯಸಿಯೊಂದಿಗೆ ಸಮಯ ಕಳೆಯಲು ಗೋವಾಗೆ ತೆರಳಿದ್ದ ಪತಿಯೊಬ್ಬ ಪಣಜಿ ವಿಮಾನ ನಿಲ್ದಾಣದಲ್ಲಿ ತನ್ನ ಪತ್ನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಪತ್ನಿಗೆ ಸುಳ್ಳು ಹೇಳಿ ತನ್ನ ಪ್ರೇಯಸಿಯೊಂದಿಗೆ ಗೋವಾಗೆ ತೆರಳಿದ್ದ ಪತಿ ಪಣಜಿ ವಿಮಾನ ನಿಲ್ದಾಣದಲ್ಲಿ ಪತ್ನಿಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಪತ್ನಿಯಿಂದ ಹಿಗ್ಗಾಮುಗ್ಗಾ ಬೈಗುಳ ತಿಂದ ವಿಡಿಯೊ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸ್ ಆ್ಯಪ್ ನಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಗಂಡನ ಬಗ್ಗೆ ಮೊದಲೇ ಅನುಮಾನವಿದ್ದ ಪತ್ನಿ ಆತ ಮನೆ ತೊರೆಯುತ್ತಿದ್ದಂತೆಯೇ ಆತನನ್ನು ಹಿಂಬಾಲಿಸಿ, ಬೇರೊಂದು ವಿಮಾನದಲ್ಲಿ ಅವರಿಗಿಂತಲೂ ಮೊದಲೇ ಪಣಜಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಳೆ.
ಪತಿ ಮಹಾಶಯ ಗೆಳತಿಯೊಂದಿಗೆ ಇನ್ನೇನು ಸಂತೋಷದ ಕ್ಷಣ ಕಳೆಯುವ ಆಸೆಯೊಂದಿಗೆ ವಿಮಾನ ನಿಲ್ದಾಣದ ಹೊರ ಬರುತ್ತಿದ್ದಂತೆಯೇ ಅವರನ್ನು ಎದುರುಗೊಂಡ ಪತ್ನಿ ಪತಿಗೆ ಹತ್ತಿದ್ದ ಚಳಿ ಬಿಡಿಸಿದ್ದಾಳೆ. ಇವಿಷ್ಟೂ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೊ ಮಾಡಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ