ನವದೆಹಲಿ: ಸಮಾನ ಶ್ರೇಣಿ ಸಮಾನ ಪಿಂಚಣಿಗಾಗಿ ಚಳವಳಿ ನಡೆಸುತ್ತಿರುವ ಮಾಜಿ ಸೈನಿಕರ ಬೇಡಿಕೆಯಂತೆ ಪಿಂಚಣಿಯನ್ನು ವಾರ್ಷಿಕವಾಗಿ ಪರಿಷ್ಕರಿಸುವ ಸಾಧ್ಯತೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.
ಸಣ್ಣ ವಯಸ್ಸಿನಲ್ಲೇ ನಿವೃತ್ತರಾಗುವ ಯೋಧರ ಹಿತವನ್ನು ಹೆಚ್ಚಿನ ಪಿಂಚಣಿ ನೀಡುವ ಮೂಲಕ ಕಾಯ್ದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ವಾರ್ಷಿಕ ಪಿಂಚಣಿ ಪರಿಷ್ಕರಣೆ ಪ್ರಪಂಚದಲ್ಲಿ ಎಲ್ಲಿಯೂ ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ಸಮಾನ ಶ್ರೇಣಿಗೆ ಸಮಾನ ಪಿಂಚಣಿ (ಒಆರ್‌ಒಪಿ)ಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಅವರು,ಒಂದೇ ಒಂದು ಸಮಸ್ಯೆಯೆಂದರೆ ಅಂಕಗಣಿತದ ಲೆಕ್ಕಾಚಾರ ಎಂದರು. ಸರ್ಕಾರಿ ಉದ್ಯೋಗಿಗಳ 7ನೇ ವೇತನ ಆಯೋಗದ ಶಿಫಾರಸುಗಳು ಶೀಘ್ರದಲ್ಲೇ ಜಾರಿಯಾಗಲಿವೆ ಎಂದು ಅವರು ತಿಳಿಸಿದರು.
ಜಂತರ್ ಮಂಥರ್ ನಲ್ಲಿ ನಿವೃತ್ತ ಸೈನಿಕರು ನಡೆಸುತ್ತಿರುವ ಪ್ರತಿಭಟನೆ ಉಪವಾಸ ಸತ್ಯಾಗ್ರಹ 78ನೇ ದಿನಕ್ಕೆ ತಲುಪಿದೆ. ವರ್ಷಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪಿಂಚಣಿ ಪರಿಷ್ಕರಣೆ ನಡೆಸಲು ಸಾಧ್ಯವಿಲ್ಲ ಎಂದರು ಅವರು ಹೇಳಿದರು.