ನವದೆಹಲಿ: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಐರೋಪ್ಯ ಒಕ್ಕೂಟದ ಮಾಲ್ಟಾ ದೇಶದಲ್ಲಿ ನೆಲೆಸಿರುವುದು ಪತ್ತೆಯಾಗಿದೆ.
ಇಂಟರ್ ಪೊೀಲ್ ಲಲಿತ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ.
ಒಂದು ವೇಳೆ ಲಲಿತ್ ಬಂಧನವಾದರೆ ಎನ್‍ಡಿಎ ಸರ್ಕಾರಕ್ಕೆ ತುಸು ನೆಮ್ಮದಿ ಸಿಕ್ಕಂತಾಗಲಿದೆ. ಈಗಾಗಲೇ ಈ ವಿಚಾರವಾಗಿ ಪ್ರತಿಪಕ್ಷಗಳಿಂದ ಮೋದಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದೆ.
ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್, ರಾಜ ಸ್ಥಾನ ಸಿಎಂ ವಸುಂಧರಾ ಅವರು ಲಲಿತ್‍ಗೆ ನೆರವು ನೀಡಿದ್ದಾರೆ. ಹಾಗಾಗಿ ಅವರನ್ನು ವಜಾ ಮಾಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸುತ್ತಲೇ ಬಂದಿವೆ.