ರಾಮೇಶ್ವರ: ಶ್ರೀಲಂಕಾ ವ್ಯಾಪ್ತಿಗೊಳಪಡುವ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ 16 ಜನ ತಮಿಳುನಾಡು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ತಮಿಳುನಾಡಿನ ಪುಡುಕೊಟ್ಟೈ ಜಿಲ್ಲೆಯ ಜಗಧಪಟ್ಟಿನಂ ಪ್ರದೇಶದ 16 ಮೀನುಗಾರರು ರಾಷ್ಟ್ರದ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆ ನಡೆಸಿರುವ ಆರೋಪದಲ್ಲಿ ಲಂಕಾ ನೌಕಾಪಡೆ ಅವರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ರಾತ್ರಿ ಮೀನು ಹಿಡಿಯುವ ಉದ್ದೇಶದಿಂದ ಸಮುದ್ರಕ್ಕೆ ತೆರಳಿದ್ದ ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲ ಮೀನುಗಾರರು ಗಾಯಗೊಂಡಿದ್ದಾರೆ. ಅಲ್ಲದೇ ಮೀನುಗಾರರ ಹಡಗಿನಲ್ಲಿ ಕೆಲವು ಕಲ್ಲುಗಳು ಕಾಣಿಸಿವೆ. ಈ ಬಗ್ಗೆ ನೌಕಾಪಡೆ ಮಾಹಿತಿ ನೀಡಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರನ್ ತಿಳಿಸಿದ್ದಾರೆ.