ರತನ್ ಟಾಟಾ 
ದೇಶ

ನನ್ನ ಜೀವನ ಬದಲಿಸಿದ್ದು 26/11ರ ಮುಂಬೈ ದಾಳಿ: ರತನ್ ಟಾಟಾ

26/11 ರಂದು ನಡೆಡ ಮುಂಬಯಿ ದಾಳಿ ನನ್ನ ಜೀವನದ ದಿಕ್ಕನ್ನೇ ಬದಲಿಸಿದೆ ಎಂದು ಟಾಟಾ ಟ್ರಸ್ಟ್​ನ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ

ವಡೋದರಾ: 26/11 ರಂದು ನಡೆಡ ಮುಂಬಯಿ ದಾಳಿ ನನ್ನ ಜೀವನದ ದಿಕ್ಕನ್ನೇ ಬದಲಿಸಿದೆ ಎಂದು ಟಾಟಾ ಟ್ರಸ್ಟ್​ನ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.

ಖಾಸಗಿ ಸಂಸ್ಥೆಯೊಂದರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನನ್ನ ಬದುಕಿನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರೆ ಮೊದಲು ನೆನಪಿಗೆ ಬರುವುದೇ ಮುಂಬೈ ದಾಳಿ. ಇದು ನನ್ನ ಜೀವನದಲ್ಲಿ ಬದಲಾವಣೆಯ ಬೀರುಗಾಳಿ ಬೀಸಿದೆ ಎಂದು ಟಾಟಾ ಟ್ರಸ್ಟ್​ನ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.

ಉಗ್ರರ ಅಟ್ಟಹಾಸ ನನ್ನ ಧ್ವನಿಯನ್ನೆ ಅಡಗಿಸಿತ್ತು. ದಾಳಿಯಲ್ಲಿ ಸಂಭವಿಸಿದ ಸಾವು ನೋವಿನ ಹೃದಯ ವಿದ್ರಾವಕ ಘಟನೆಯಿಂದ ಇಂದಿಗೂ ಹೊರ ಬರಲು ಸಾಧ್ಯವಾಗುತ್ತಿಲ್ಲ. ಆ ಸಂದರ್ಭದಲ್ಲಿ ಪ್ರತಿ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದಾಗ ಮನ ಕರಗುತ್ತಿತ್ತು ಎಂದು ನೊಂದು ಹೇಳಿದ್ದಾರೆಯ

ಗಾಯಾಳುಗಳು ಹಾಗೂ ರೋಗಿಗಳ ಹಣ ಕಟ್ಟಲು ಅಂದು ಯಾರೂ ಮುಂದೆ ಬರುತ್ತಿರಲ್ಲಿಲ್ಲ. ಇದರಿಂದಾಗಿ ಇಂಥವರಿಗಾಗಿಯೇ ಒಂದು ಟ್ರಸ್ಟ್ ಹುಟ್ಟುಹಾಕುವ ಆಲೋಚನೆ ಬಂದಿತು ಎಂದು ತಿಳಿಸಿದರು. ಈ ದೇಶದ ಕಾನೂನಿನಲ್ಲಿ ಎಲ್ಲರಿಗೂ ಸಮಾನ ಅವಕಾಶವಿದ್ದು, ದೇಶದ ಸರ್ವಾಂಗೀಣ ಪ್ರಗತಿಗೆ ಎಲ್ಲರೂ ಶ್ರಮಿಸಬೇಕೆಂದು ಸಲಹೆ ನೀಡಿದರು .

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT