ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಹಂದ್ಯಾಳ ಲಕ್ಷ್ಮೀನಾರಾಯಣಸ್ವಾಮಿ ದತ್ತು ಬುಧವಾರ ನಿವೃತ್ತರಾದರು.
ದತ್ತು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಪಟ್ಟಣಗೆರೆಯವರು. ಕಳೆದ ವರ್ಷದ ಸೆ. 28ರಂದು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಅವರು, ತಮಿಳುನಾಡು ಸಿಎಂ ಜಯಲಲಿತಾ ಭ್ರಷ್ಟಾಚಾರ, ರಾಜೀವ್ ಗಾಂಧಿ ಹಂತಕರ ಕ್ಷಮಾದಾನ, ರಾಹುಲ್ ಗಾಂಧಿ ಪೌರತ್ವ, ಆಧಾರ್ ಕಾರ್ಡ್‍ನಂಥ ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿ ಗಮನ ಸೆಳೆದಿದ್ದರು.
ಮಾನವ ಹಕ್ಕು ಆಯೋಗದ ಮುಖ್ಯಸ್ಥರಾಗಿ ದತ್ತು..!
ಇದೇ ವೇಳೆ ನಿವೃತ್ತ ನ್ಯಾಯಾಧೀಶ ಹೆಚ್ ಎಲ್ ದತ್ತು ಅವರನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ನಿವೃತ್ತ ನ್ಯಾಯಾಧೀಶರಾದ ದತ್ತು ಅವರು, ಮಾನವ ಹಕ್ಕು ಆಯೋಗಕ್ಕೆ ತಮ್ಮನ್ನು ನೇಮಕ ಮಾಡುವುದಾದರೆ ಖಂಡಿತಾ ನಾನು ಆ ಜವಾಬ್ದಾರಿ ಹೊರಲು ಸಿದ್ಧ ಎಂದು ಹೇಳಿದ್ದಾರೆ.