ನವದೆಹಲಿ: ಭವಿಷ್ಯ ನಿಧಿ ಹಣ ಪಡೆಯುವುದು ಇನ್ನು ಸುಲಭ. ಏಕೆಂದರೆ ಅರ್ಜಿಗೆ ಉದ್ಯೋಗದಾತರ ದೃಢೀಕರಣ ಬೇಕಿಲ್ಲ.
ಆದರೆ ಈ ಸೌಲಭ್ಯ ಬಳಸಿಕೊಳ್ಳಲು ಭವಿಷ್ಯ ನಿಧಿ ಸಂಸ್ಥೆ ನೀಡುವ ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಅನ್ನು ಆ್ಯಕ್ಟಿವೇಟ್ ಗೊಳಿಸಿಕೊಳ್ಳುವುದು ಕಡ್ಡಾಯ. ಉದ್ಯೋಗಿಗಳು ಆಧಾರ್, ಬ್ಯಾಂಕ್ ಖಾತೆಯನ್ನು ಯುಎಎನ್ ಜತೆ ಸಂಯೋಜಿಸ ಬೇಕು. ಯುಎಎನ್ ಆ್ಯಕ್ಟಿವೇ ಟ್ ಮಾಡಿಕೊಂಡವರು ನಮೂನೆ19, 10ಸಿ ಮತ್ತು 31 ಅನ್ನು ಉದ್ಯೋಗದಾತರ ದೃಢೀಕರಣ ಇಲ್ಲದೆ ನೇರವಾಗಿ ಸಂಬಂಧಿಸಿದ ಆಯುಕ್ತರಿಗೆ ಸಲ್ಲಿಸಬಹುದು.