ದೇಶ

ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಗೆ ವಿಚ್ಛೇದನ ನೀಡುವಂತಿಲ್ಲ: ಸುಪ್ರೀಂ ಕೋರ್ಟ್

Shilpa D

ನವದೆಹಲಿ: ಮಾರಣಾಂತಿಕ ರೋಗದಿಂದ ಬಳಲುತ್ತಿರುವ ಪತ್ನಿಯಿಂದ ಪತಿ ವಿಚ್ಛೇದನ ಪಡೆಯುವ ಆಗಿಲ್ಲ ಎಂದು ಸುಪ್ರಿಂಕೋರ್ಟ್ ಹೊಸ ನಿಯಮ ಜಾರಿಗೆ ತಂದಿದೆ.

ಮಹಿಳೆ ಅನಾರೋಗ್ಯ ಪೀಡಿತಳಾಗಿ, ಪರಸ್ಪರ ಒಪ್ಪಿಗೆ ಮೇರೆಯೂ ವಿಚ್ಛೇದನ ನೀಡುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ. ಮಹಿಳೆ ಕಾಯಿಲೆಯಿಂದ ಪೂರ್ಣವಾಗಿ ಗುಣಮುಖವಾದ ನಂತರ ವಿಚ್ಛೇದನ ಪಡೆಯಬಹುದು ಎಂದು ನ್ಯಾ. ಇಕ್ಬಾಲ್ ನೇತೃತ್ವದ ನ್ಯಾಯಪೀಠ ಹೇಳಿದೆ.

ಹಿಂದೂ ಸಂಪ್ರದಾಯದಲ್ಲಿ ವಿವಾಹ ಒಂದು ಪವಿತ್ರ ಬಂಧನವಾಗಿದೆ. ಪತಿಗೋಸ್ಕರ ಸರ್ವಸ್ವವನ್ನು ತ್ಯಾಗ ಮಾಡುವ ಹೆಂಡತಿಯ ಕಷ್ಟ ಕಾಲದಲ್ಲಿ ಗಂಡ ಆಸರೆಯಾಗಿ ನಿಲ್ಲಬೇಕು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

SCROLL FOR NEXT