ನವದೆಹಲಿ: ಜನಲೋಕಪಾಲ್ ಮಸೂದೆ ಜಾರಿ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಉಚ್ಚಾಟಿತಗೊಂಡಿರುವ ಪ್ರಶಾಂತ್ ಭೂಷಣ್, ಭ್ರಷ್ಟಾಚಾರ ವಿರೋಧಿ ಆಂದೋಲನದ ಮುಖಂಡ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಆಮ್ ಆದ್ಮಿ ಪಕ್ಷದಿಂದ ಉಚ್ಚಾಟನೆಗೊಂಡ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಸ್ವರಾಜ್ ಅಭಿಯಾನ್ ಎಂಬ ಸಂಘಟನೆ ನಡೆಸುತ್ತಿದ್ದೂ, ಅಣ್ಣಾ ಹಜಾರೆ ತಮ್ಮ ಬೆಂಬಲಕ್ಕೆ ಬರಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.
ಈಗಾಗಲೇ ಶಾಸನ ಸಭೆಯಲ್ಲಿ ಜನಲೋಕಪಾಲ್ ಮಸೂದೆ ಬಗ್ಗೆ ಪ್ರಸ್ತಾಪಿಸಿದ್ದು, ಇದಕ್ಕೆ ಅಣ್ಣಾ ಹಜಾರೆ ಬೆಂಬಲ ಸೂಚಿಸಿದ್ದಾರೆ.
ಜನಲೋಕಪಾಲ್ ಮಸೂದೆಯು ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯ ಒಂದು ಅಂಶವಾಗಿತ್ತು. ವಕೀಲರೂ ಆಗಿರುವ ಪ್ರಶಾಂತ್ ಭೂಷಣ್ ರಾಳೇಗಣ್ ಸಿದ್ದಿಯಲ್ಲಿರುವ ಅಣ್ಣಾ ಹಜಾರೆ ಅವರ ಮನೆಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಈಗ ಕೇಜ್ರಿವಾಲ್ ಜಾರಿಗೆ ತರಲು ಉದ್ದೇಶಿಸಿರುವ ಜನಲೋಕಪಾಲ್ ನಲ್ಲಿ ಹಲವು ಲೋಪ ದೋಷಗಳಿವೆ ಎಂದು ದೂರಿದ್ದಾರೆ. ಹೀಗಾಗಿ ಲೋಪದೋಷಗಳನ್ನು ಬದಲಾವಣೆ ಮಾಡುವಂತೆ ಅಣ್ಣ ಹಜಾರೆ ಆಯ್ಕೆ ಸಮಿತಿಗೆ ಸೂಚಿಸಿದ್ದಾರೆ.