ಉಡುಪಿ/ಚೆನ್ನೈ: ಚೆನ್ನೈನ ಮಳೆ ಸಂತ್ರಸ್ತರಿಗೆ ಉಡುಪಿಯ ಪೇಜಾವರ ಮಠದಿಂದ ನೆರವು ಕಾರ್ಯ ಆರಂಭಿಸಲಾಗಿದೆ. ಚೆನ್ನೈನ ಟ್ರಿಪ್ಲಿಕೇನ್ ನಲ್ಲಿರುವ ಕೃಷ್ಣ ಮಂದಿರದಲ್ಲಿ ಮತ್ತು ವೇಲಾಪುರ ಚಾವಡಿ ಎಂಬಲ್ಲಿ ಬುಧವಾರ 2000 ಮಂದಿ ಗೆ, ಗುರುವಾರ 2,500 ಮಂದಿಗೆ ಅನ್ನ-ಸಾಂಬಾರು ಪೂರೈಸಲಾಗಿದೆ.
ಮನೆ ಮಠ ಕಳೆದುಕೊಂಡ ಜನ ದೇವಾಲಯ, ಛತ್ರಗಳ ನ್ನು ಆಶ್ರಯಿಸುತ್ತಿದ್ದಾರೆ. ಪೇಜಾವರ ಶ್ರೀ ಗಳು ಪರ್ಯಾಯೋತ್ಸವದ ಪೂರ್ವಭಾವಿ ಸಂಚಾರದ ಹಿನ್ನೆಲೆಯಲ್ಲಿ 2 ವಾರದ ಹಿಂದೆ ಚೆನ್ನೈಗೆ ಭೇಟಿ ನೀಡಿದ್ದರು.
ಇದೀಗ ಅವರು ಚೆನ್ನೈಯಲ್ಲಿರುವ ಭಕ್ತರ ಮೂಲಕ ಈ ಪರಿಹಾರ ಕಾರ್ಯ ಆರಂಭಿಸಿದ್ದಾರೆ. ಪ್ರವಾಹ ಇಳಿದ ತಕ್ಷಣ ಸಂತ್ರಸ್ತರಿಗೆ ಬಟ್ಟೆ, ಬರೆ ಇತ್ಯಾದಿಗಳನ್ನು ಪೂರೈಸಲು ನಿರ್ಧರಿಸಲಾಗಿದೆ ಎಂದೂ ಶ್ರೀಗಳು ಹೇಳಿದ್ದಾರೆ.