ದೇಶ

ತುರ್ತು, ಸಿಖ್ ಹತ್ಯಾಕಾಂಡ ತಪ್ಪು: ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ

Mainashree
ನವದೆಹಲಿ: ತುರ್ತುಪರಿಸ್ಥಿತಿ ಒಂದು ಪ್ರಮಾದ. 1984ರ ಸಿಖ್ ವಿರೋಧಿ ದಂಗೆ ತಪ್ಪು ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆದದ್ದು ತಪ್ಪೆಂಬುದನ್ನು ನಾವು ಜೊತೆಯಾಗಿ ಯಾಕೆ ಹೇಳಬಾರದು ಎಂದು ಪ್ರಶ್ನಿಸಿರುವ ಸಿಂಧ್ಯಾ, ಸಿಖ್ ದಂಗೆಗಳಲ್ಲಿ ಸಂಭವಿಸಿದ್ದು ಕೂಡ ತಪ್ಪೇ. ನಮ್ಮ ನಡುವೆ ಸಾಕಷ್ಟು ದೋಷಾರೋಪಣೆ ನಡೆದಿದೆ. 
ಆಡಳಿತದಲ್ಲಿದ್ದ ಸರ್ಕಾರ ಯಾವುದೆಂದು ನೋಡಿ ದೂರುವ ಬದಲಿಗೆ ಸರಿಯನ್ನು ಸರಿಯೆಂದು, ತಪ್ಪನ್ನು ತಪ್ಪೆಂದೇ ನಾವು ಹೇಳಬೇಕು. ಜಗತ್ತಿನಲ್ಲೇ ದೊಡ್ಡದಾದ ಪ್ರಜಾಪ್ರಭುತ್ವ ದೇಶವಾದ ನಮ್ಮಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ನಾವು ಎತ್ತಿ ಹಿಡಿಯಬೇಕು ಎಂದು ಸಿಂಧ್ಯಾ ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಮಾಜಿ ಸಚಿವ ಚಿದಂಬರಂ ಲೇಖಕ ಸಲ್ಮಾನ್ ರಶ್ದಿ ಅವರ ವಿವಾದಾತ್ಮಕ ಕೃತಿಯನ್ನು ನಿಷೇಧಿಸಿದ್ದ ಕ್ರಮ ಸರಿಯಲ್ಲ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು.
SCROLL FOR NEXT