ದೇಶ

ಆರ್ ಎಸ್ ಎಸ್ ಸಭೆಯಲ್ಲಿ ಮುಸ್ಲಿಂ ಮಹಿಳೆಯರಿಂದ ಕುಟುಂಬ ಯೋಜನೆ ಬಗ್ಗೆ ಪ್ರಮಾಣ ವಚನ

Shilpa D

ನವದೆಹಲಿ: ಆರ್ ಎಸ್ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್ ಕುಟುಂಬ ಯೋಜನೆ ಕುರಿತಂತೆ ಆಯೋಜಿಸಿದ್ದ ಸಭೆಯಲ್ಲಿ ಮುಸ್ಲಿಂ ಮಹಿಳೆಯರು ಕುಟುಂಬ ಯೋಜನೆ ನಿರ್ಧಾರ ಕೈಗೊಳ್ಳುವ ನಿರ್ಣಯ ಕೈಗೊಂಡಿತ್ತು.

ಅಸಹಿಷ್ಣುತೆ, ಭಯೋತ್ಪಾದನೆ ಸೇರಿದಂತೆ ಒಟ್ಟು 7 ನಿರ್ಣಯಗಳನ್ನು ಸಭೆಯಲ್ಲಿ ಕೈಗೊಂಡಿದ್ದು, ಈ ಸಭೆಗೆ ಸುಮಾರು 5 ಸಾವಿರ ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು. ಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗದ ಹಿನ್ನೆಲೆಯಲ್ಲಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳುವುದಾಗಿ 5 ಸಾವಿರ ಮುಸ್ಲಿಂ ಮಹಿಳೆಯರು ಸಂವಾದದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

'ಅಗತ್ಯ ಪೋಷಣೆ, ಶಿಕ್ಷಣ ಒದಗಿಸಲು ಸಾಧ್ಯವಾಗುವಂಥವರು ಮಾತ್ರ ಹಲವು ಮಕ್ಕಳನ್ನು ಹೊಂದಬಹುದು ಎಂದು ಕುರಾನ್‌ನಲ್ಲೇ ಸ್ಟಷ್ಟವಾಗಿ ಹೇಳಲಾಗಿದೆ. ಈ ನಿಯಮವನ್ನು ಎಲ್ಲ ಮುಸ್ಲಿಮರು ಪಾಲಿಸಿದರೆ ಒಳಿತು,'ಎಂದು ಹೇಳಿದೆ. 'ಮುಸ್ಲಿಂ ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣಕ್ಕಾಗಿ ಯೋಜನೆ ಆರಂಭಿಸುವ ಉದ್ದೇಶವಿದ್ದು, ಒಂದು ಸಾವಿರ ರೂ. ಠೇವಣಿ ನೀಡಿ ಆಜೀವ ಸದಸ್ಯತ್ವ ಪಡೆದ ಮಹಿಳೆಯರು ಯೋಜನೆಯ ಲಾಭ ಪಡೆಯಬಹುದು,'ಎಂದು ಇಂದ್ರೇಶ್‌ ತಿಳಿಸಿದ್ದಾರೆ.

SCROLL FOR NEXT