ತಮಿಳುನಾಡು ಜಲಪ್ರವಾಹ(ಸಂಗ್ರಹ ಚಿತ್ರ) 
ದೇಶ

ನೇಪಾಳದ ಭೂಕಂಪದ ಬಳಿಕ ತಮಿಳುನಾಡು ಜಲಪ್ರಳಯಕ್ಕೂ ಸಿಲುಕಿದ ಯುವಕನ ರಕ್ಷಣೆ

ಕೆಲವು ತಿಂಗಳ ಹಿಂದೆ ನೇಪಾಳದ ಭೀಕರ ಭೂಕಂಪದಲ್ಲಿ ಬದುಕಿಳಿದಿದ್ದ ವ್ಯಕ್ತಿಯೊಬ್ಬ ಚೆನ್ನೈ ನ ಜಲಪ್ರಳಯಕ್ಕೆ ಸಿಲುಕಿ ಮತ್ತೊಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚೆನ್ನೈ: ಕೆಲವು ತಿಂಗಳ ಹಿಂದೆ ನೇಪಾಳದ ಭೀಕರ ಭೂಕಂಪದಲ್ಲಿ ಬದುಕಿಳಿದಿದ್ದ ವ್ಯಕ್ತಿಯೊಬ್ಬ ಚೆನ್ನೈ ನ ಜಲಪ್ರಳಯಕ್ಕೆ ಸಿಲುಕಿ ಮತ್ತೊಮ್ಮ ಪ್ರಾಣಾಪಾಯದಿಂದ  ಪಾರಾಗಿದ್ದಾನೆ.
ತಮಿಳುನಾಡಿನ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ನೇಪಾಳ ಮೂಲದ 18 ವರ್ಷದ ಯುವಕ ಅಭಿಕ್ ಥಾಪ, ಚೆನ್ನೈ ನ ಭೀಕರ ಜಲಪ್ರಯಳದಿಂದ ಪಾರಾಗಿರುವ ಯುವಕ. ಎಸ್.ಆರ್.ಎಂ ವಿಶ್ವವಿದ್ಯಾನಿಲಯದಲ್ಲಿ ಜೆನೆಟಿಕ್ಸ್ ವಿದ್ಯಾರ್ಥಿಯಾಗಿರುವ ಥಾಪ,  ಜಲಪ್ರಳಯದಲ್ಲಿ ಸಿಲುಕಿಕೊಂಡಿದ್ದ.    
ಥಾಪ ಹಾಗೂ ಆತನ ಇತರ ಸಹಪಾಠಿಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡ  ಜಲಪ್ರವಾಹದಿಂದ ರಕ್ಷಿಸಿ ಜಲಾವೃಉತಗೊಂಡ ಚೆನ್ನೈ ನಿಂದ 30 ಕಿ.ಮಿ ದೂರದಲ್ಲಿರುವ ತಾಂಬರಂ ವಾಯು ನೆಲೆಗೆ ತಲುಪಿಸಿದೆ.  ರಕ್ಷಣಾ ಕಾರ್ಯಾಚರಣೆ ಬಗ್ಗೆ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿದ್ದು, ಈ ಹಿಂದೆ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ನಾನು ಮತ್ತು ನನ್ನ ಕುಟುಂಬದವರು ಸಿಕುಕಿಕೊಂಡಿದ್ದೆವು, ರಕ್ಷಣಾ ತಂಡದ ಸಹಾಯದಿಂದ ಅಪಾಯದಿಂದ ಪಾರದೆವು ಎಂದು ಹೇಳಿದ್ದಾರೆ.
ಕೆಲವೇ ತಿಂಗಳ ಅಂತರದಲ್ಲಿ ಎರಡು ಬಾರಿ ತೀವ್ರತರ ನೈಸರ್ಗಿಕ ವಿಪತ್ತಿಗೆ ಸಿಲುಕಿದರೂ ಪಾರಾಗಿರುವ ಅಭಿಕ್ ಥಾಪ, ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಚೆನ್ನೈ ನ ಜಲಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ