ದೇಶ

ಯುನೈಟೆಡ್ ಕಿಂಗ್‍ಡಮ್ ನಲ್ಲಿ ನೇತಾಜಿ ಪತ್ರಗಳ ಬಿಡುಗಡೆ

Mainashree
ಲಂಡನ್: ನೇತಾಜಿ ಸುಭಾಶ್ಚಂದ್ರ ಬೋಸ್‍ರಿಗೆ ಸಂಬಂಧಿಸಿದ 33 ಕಡತಗಳನ್ನು ಭಾರತದ ಪ್ರಧಾನಿ ಕಚೇರಿಗೆ ರಾಷ್ಟ್ರೀಯ ದಾಖಲೆಗಳ ಕಚೇರಿಗೆ ಕೆಲ ದಿನಗಳ ಹಿಂದೆ ನೀಡಿತ್ತು. ಅದಕ್ಕೆ ಪೂರಕವಾಗಿ ಭಾರತ ಮತ್ತು ರಷ್ಯಾ ನಡುವೆ ಸುಭಾಶ್ಚಂದ್ರರು ಬದುಕಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಡೆದಿದ್ದ ಪತ್ರಗಳನ್ನು ಯುನೈಟೆಡ್ ಕಿಂಗ್‍ಡಮ್ ನಲ್ಲಿ ಮಂಗಳವಾರ ಬಿಡುಗಡೆ ಮಾಡಲಾಗಿದೆ. 
ಬೋಸ್‍ರ ಮರಿ ಅಳಿಯ ಪತ್ರಕರ್ತ ಆಶಿಶ್ ರೇ ಆಯ್ದ ಪತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪತ್ರಗಳನ್ನು ಸಾರ್ವಜನಿಕಗೊಳಿಸುವುದಾಗಿ ತಿಳಿಸಿದ್ದಾರೆ.
ಮಾಸ್ಕೊದಲ್ಲಿನ ಭಾರತದ ರಾಯಭಾರ ಕಚೇರಿ ಮತ್ತು ರಷ್ಯಾ ಸರ್ಕಾರದ ನಡುವೆ ಪತ್ರವ್ಯವಹಾರ ನಡೆದಿತ್ತು.
SCROLL FOR NEXT