ಜಿಯಾ ಖಾನ್ ಮತ್ತು ಸೂರಜ್ ಪಂಚೋಲಿ(ಸಂಗ್ರಹ ಚಿತ್ರ) 
ದೇಶ

ಜಿಯಾಳ ಸಾವು ಪ್ರಕರಣ: ಆರೋಪ ಪಟ್ಟಿ ಸಲ್ಲಿಸಿದ ಸಿಬಿಐ

ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಕುರಿತಂತೆ ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ನಟಿಯ ಗರ್ಭಧಾರಣೆಗೆ...

ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಕುರಿತಂತೆ ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ನಟಿಯ ಗರ್ಭಧಾರಣೆಗೆ ಸಂಬಂಧಪಟ್ಟ ಹಲವು ವಿಷಯಗಳನ್ನು ಹೊಂದಿದೆ. ಆಕೆಯ ಬಾಯ್ ಫ್ರೆಂಡ್ ಸೂರಜ್ ಪಂಚೋಲಿ ಗರ್ಭಪಾತ ಮಾಡಿಸಿಕೊಳ್ಳಲು ನೆರವಾಗಿದ್ದು, ಗರ್ಭಪಾತ ಮಾಡಿಸಿಕೊಂಡ ನಂತರ ಭಾವನಾತ್ಮಕವಾಗಿ ಆಕೆ ಕ್ಷೋಭೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಮುಂಬೈ ಹೈಕೋರ್ಟ್ ನ ವಿಶೇಷ ಅಪರಾಧ ವಿಭಾಗ ಜಿಯಾ ಖಾನ್ ನದ್ದು ಆತ್ಮಹತ್ಯೆ ಮತ್ತು ಇದಕ್ಕೆ ಪಂಚೋಲಿ ವಿರುದ್ಧ ಆತ್ಮಹತ್ಯೆ ಕುಮ್ಮಕ್ಕು ಕೇಸು ದಾಖಲಿಸುವ ಸಾಧ್ಯತೆಯಿದೆ.
ಜಿಯಾ ಖಾನ್ ಸಾವಿನ ನಂತರ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದ ಆಕೆಯ ತಾಯಿ ರಬಿಯಾ ಖಾನ್, ತಮ್ಮ ಮಗಳ ಸಾವಿನಲ್ಲಿ ಯಾರೋ ಅನ್ಯಾಯವೆಸಗಿದ್ದಾರೆ ಎಂದು ದೂರು ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿಬಿಐಗೆ ತನಿಖೆಗೆ ಆದೇಶಿಸಿತ್ತು.

ನಿನ್ನೆ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಬಿಐ ಜಿಯಾ ಖಾನ್ ನ ಗರ್ಭಪಾತದ ಹಿಂದೆ ಸೂರಜ್ ಪಂಚೋಲಿಯ ಪಾತ್ರವಿರುವುದು ತಿಳಿದುಬರುತ್ತದೆ. ಜಿಯಾ ತಾನು ಗರ್ಭವತಿ ಎಂಬುದನ್ನು ಗರ್ಭವತಿಯಾಗಿ ನಾಲ್ಕು ವಾರಗಳ ನಂತರ ಹೇಳಿದ್ದಳು. ನಂತರ ಅವರಿಬ್ಬರೂ ವೈದ್ಯರನ್ನು ಭೇಟಿಯಾಗಿ ಗರ್ಭಪಾತ ಮಾಡಿಸಿಕೊಳ್ಳಲು ಮಾತ್ರೆಯನ್ನು ತೆಗೆದುಕೊಂಡಿದ್ದರು. ಆದರೆ ಅದು ಸಹಾಯವಾಗಲಿಲ್ಲ. ನಂತರ ಮತ್ತೊಬ್ಬ ಸ್ತ್ರೀ ರೋಗ ವೈದ್ಯರನ್ನು ಭೇಟಿ ಮಾಡಿ ಮಾತ್ರೆ ತೆಗೆದುಕೊಂಡಿದ್ದರು.

ಮಾತ್ರೆ ತೆಗೆದುಕೊಂಡ ನಂತರ ರಕ್ತಸ್ರಾವವಾವಾಯಿತು. ಜಿಯಾ ಖಾನ್ ಸೂರಜ್ ಪಂಚೋಲಿಯನ್ನು ಸಹಾಯಕ್ಕೆ ಕರೆದಳು. ಆತ ವೈದ್ಯರನ್ನು ಕರೆದಾಗ ವೈದ್ಯರು ಬಂದು ಪರೀಕ್ಷಿಸಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು. ಆದರೆ ಜಿಯಾ ಖಾನ್ ಆಸ್ಪತ್ರೆಗೆ ದಾಖಲಾದರೆ ವಿಷಯ ಸಾರ್ವಜನಿಕವಾಗಿ ಗೊತ್ತಾಗುತ್ತದೆ ಎಂದು ಭಾವಿಸಿದ ಸೂರಜ್ ಪಂಚೋಲಿ ಆಸ್ಪತ್ರೆಗೆ ದಾಖಲಿಸಲಿಲ್ಲ. ತಾನೇ ಪರಿಸ್ಥಿತಿಯನ್ನು ನಿಭಾಯಿಸಿದನು.ಭ್ರೂಣವನ್ನು ತನ್ನ ಕೈಯಲ್ಲೇ ಸ್ವಚ್ಛಗೊಳಿಸಿ ಪಕ್ಕದಲ್ಲಿದ್ದ ಶೌಚಾಲಯಕ್ಕೆ ಎಸೆದನು ಎಂದು ಸಿಬಿಐ ವಿವರಿಸಿದೆ.

ಈ ಘಟನೆಯ ನಂತರ ಜಿಯಾ ಖಾನ್  ತೀವ್ರ ಒತ್ತಡಕ್ಕೆ ಒಳಗಾಗಿದ್ದಳು. ಸೂರಜ್ ಪಂಚೋಲಿ ಆಕೆಯ ಜೀವನದಿಂದ ಇಷ್ಟು ಹೊತ್ತಿಗೆ ಹೊರಬಂದಿದ್ದ. ಈ ಎಲ್ಲಾ ಘಟನೆಗಳು ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿತು ಎಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ವಿವರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮತ್ತೆ ಗಡಿಯೊಳಗೆ ನುಗ್ಗಿದ 'ಪಾಕ್ ಡ್ರೋನ್' ಗಳು, ಭಾರತೀಯ ಸೇನಾಪಡೆಯಿಂದ ಗುಂಡಿನ ದಾಳಿ!

'ಕರ್ನಾಟಕದ ಹಿತಕ್ಕಿಂತ, ಹೈಕಮಾಂಡ್ ಹಂಗೇ ಹೆಚ್ಚಾಯಿತೇ? ಜರ್ಮನಿ ಚಾನ್ಸೆಲರ್ ಸ್ವಾಗತಿಸದ CM, DCM, ವಿರುದ್ಧ ಬಿಜೆಪಿ ಕಿಡಿ!

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಬಿ- ರಿಪೋರ್ಟ್, ಜ. 22ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ!

ಕುರ್ಚಿ ಕಾಳಗ: ಸಿದ್ದರಾಮಯ್ಯ, ಡಿಕೆಶಿ ಜತೆ ರಾಹಲ್ ಗಾಂಧಿ ಪ್ರತ್ಯೇಕ ಚರ್ಚೆ; ಕುತೂಹಲ ಮೂಡಿಸಿದೆ ಚುಟುಕು ಮಾತುಕತೆ! Video

ಫಿನಾಲೆ ಹಂತಕ್ಕೆ 'ಬಿಗ್‌ಬಾಸ್‌ ಕನ್ನಡ' 12; ಎಲ್ಲೆಲ್ಲೂ ಗಿಲ್ಲಿ ನಟನ ಹಾವಳಿ! ಗೆಲ್ಲುವ ಅದೃಷ್ಟ ಯಾರಿಗಿದೆ?

SCROLL FOR NEXT