ಕೋಲ್ಕತಾ: 2012ರಲ್ಲಿ ಕೋಲ್ಕತಾದ ಪಾರ್ಕ್ ಸ್ಟ್ರೀಟ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಕೋರ್ಟ್ ತಲಾ 10 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮೂವರು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದ ಕೋಲ್ಕತಾ ಸೆಷನ್ಸ್ ಕೋರ್ಟ್, ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಚಲಿಸುವ ಕಾರಿನಲ್ಲಿ 40 ವರ್ಷದ ಸುಝೆಟ್ಟೆ ಜೋರ್ಡನ್ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ರುಮನ್‌ಖಾನ್, ನಾಸಿರ್ ಖಾನ್ ಹಾಗೂ ಸುಮಿತ್ ಬಜಾಜ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಫೆಬ್ರುವರಿ 5, 2012ರಂದು ಕೋಲ್ಕತಾದ ಪಾರ್ಕ್ ಸ್ಟ್ರೀಟ್‌ನ ನೈಟ್ ಕ್ಲಬ್ ಹತ್ತಿರ ನಿಂತಿದ್ದ ಮಹಿಳೆಯನ್ನು ಕಾರಿನೊಳಗೆ ಎಳೆದುಕೊಂಡಿದ್ದ ಅಪರಾಧಿಗಳು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಪ್ರಕರಣದಲ್ಲಿ ಐವರು ದೋಷಿಗಳಾಗಿದ್ದು, ಪ್ರಮುಖ ಇಬ್ಬರು ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದಾರೆ.
ತನಗಾದ ಅನ್ಯಾಯ ಯಾರಿಗೂ ಆಗಬಾರದೆಂಬ ಉದ್ದೇಶದಿಂದ ತನ್ನ ಗುರುತನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದ ಮಹಿಳೆ, ಕಳೆದ ಮಾರ್ಚ್ ನಲ್ಲಿ ಮೆದುಳು ಜ್ವರದಿಂದ ಮೃತಪಟ್ಟಿರು.