ಲಖನೌ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಅಬೆ ಶಿಂಝೊ ಡಿ. 12ರಂದು ವಾರಾಣಸಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಆಗಸವನ್ನು ಶುಭ್ರವಾಗಿರಿಸಲ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಸದ್ಯ ವಾತಾವರಣ ತಿಳಿಯಾಗಿದ್ದರೂ, ಇನ್ನೆರಡು ದಿನಗಳಲ್ಲಿ ತೀವ್ರ ಮಂಜು ಕವಿಯುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ, ವಾತಾವರಣವನ್ನು ಶುಭ್ರವಾಗಿಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.
ವಿಮಾನ ಹಾರಾಟ ಸುಗಮವಾಗಿಸುವ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ರಾಜ್ಯದ ಉನ್ನತ ಅಧಿಕಾರಿಗಳು ಅಣಕು ಕಾರ್ಯಾಚರಣೆಗಳನ್ನೂ ನಡೆಸಿದ್ದಾರೆ. ಭದ್ರತೆಗಾಗಿ ಕೇಂದ್ರ ಅರೆ ಸೈನಿಕ ಪಡೆಯ 15 ತುಕಡಿಗಳನ್ನೂ ಕರೆಸಿಕೊಳ್ಳಲಾಗಿದೆ.