ನವದೆಹಲಿ: ಐಡಿಬಿಐ ಬ್ಯಾಂಕ್‍ಗೆ ರು.900 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ ಮಲ್ಯರನ್ನು ಸಿಬಿಐ ವಿಚಾರಣೆ ನಡೆಸಿದೆ. ಕಿಂಗ್‍ಫಿಶರ್ ಏರ್‍ಲೈನ್ಸ್‍ಗೆ ಬ್ಯಾಂಕ್ ನಿಂದ ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಸಲಾಗಿದೆ.
ದೆಹಲಿಯಲ್ಲಿರುವ ಸಿಬಿಐ ಪ್ರಧಾನ ಕಚೇರಿಯಲ್ಲಿ ಮಲ್ಯರಿಂದ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ. ಆದರೆ ಮಲ್ಯರ ಆಪ್ತ ಮೂಲಗಳು ಹಾಗೂ ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಕಿಂಗ್‍ಫಿಶರ್‍ನ ಮುಖ್ಯ ಹಣಕಾಸು ಅಧಿಕಾರಿ ಎ.ರಘುನಾಥನ್, ಮಲ್ಯ ಮತ್ತು ಐಡಿಬಿಐ ಬ್ಯಾಂಕ್‍ನ ಹಲವು ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿತ್ತು. ಕೇಂದ್ರ ತನಿಖಾ ಸಂಸ್ಥೆ ಒಟ್ಟು 27 ವಂಚನೆ ಪ್ರಕರಣಗಳನ್ನು ಕಿಂಗ್‍ಫಿಶರ್ ವಿರುದ್ಧ ದಾಖಲಿಸಿಕೊಂಡಿದೆ. 2012ರ ಅಕ್ಟೋಬರ್ ನಿಂದ ಕಿಂಗ್‍ಫಿಐಖಿಅï ಹಾರಾಟ ಸ್ಥಗಿತಗೊಳಿಸಿದೆ.