ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿರುವ ವಿಮಾನ
ಚೆನ್ನೈ: ಚೆನ್ನೈ ಜಲಪ್ರಳಯದಿಂದ ರಕ್ಷಣೆ ಪಡೆಯುವುದಕ್ಕಾಗಿ ಕರಿನಾಗರ ಹಾವು ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನದ ಚಕ್ರದೆಡೆಯಲ್ಲಿ ಅವಿತುಕೊಂಡಿತ್ತು!
ಜಲ ಪ್ರಳಯದ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಳಿಸಿತ್ತು. ಇದೀಗ ಮಳೆ ನಿಂತ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಶುಚಿಗೊಳಿಸಿದಾಗ ನಾಗರಹಾವು ವಿಮಾನದ ಚಕ್ರ ಮಧ್ಯೆ ಸುರಕ್ಷಿತ ಜಾಗ ಕಂಡುಕೊಂಡಿರುವುದು ಬೆಳಕಿಗೆ ಬಂದಿದೆ. ಚಕ್ರದೆಡೆಯಲ್ಲಿದ್ದ ಹಾವನ್ನು ಹೊರಗಟ್ಟಲು ತುಂಬ ಹೊತ್ತು ಪ್ರಯತ್ನಿಸಿದ ನಂತರ ಅಧಿಕೃತರು ನಾಗರಹಾವನ್ನು ಅಲ್ಲಿಂದ ಓಡಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ವಿಮಾನ ನಿಲ್ದಾಣ ಶುಚಿಗೊಳಿಸುವ ವೇಳೆ ಹಾವು ಕಚ್ಚಿ ಇಬ್ಬರು ಕೆಲಸಗಾರರು ಸಾವನ್ನಪ್ಪಿದ್ದರು.
ವಿಮಾನದ ಚಕ್ರದ ಮಧ್ಯೆ ಅವಿತಿರುವ ಕರಿನಾಗರ ಹಾವನ್ನು ಓಡಿಸುತ್ತಿರುವ ದೃಶ್ಯವನ್ನು ವೀಡಿಯೋದಲ್ಲಿ ನೋಡಬಹುದು.