ದೇಶ

ಪ್ಯಾರಿಸ್ ಒಪ್ಪಂದ 'ಹವಾಮಾನ ನೀತಿ'ಯ ಗೆಲುವು: ನರೇಂದ್ರ ಮೋದಿ

Sumana Upadhyaya

ನವದೆಹಲಿ: ಕಳೆದ ರಾತ್ರಿ ಪ್ಯಾರಿಸ್ ನಲ್ಲಿ ಮುಕ್ತಾಯಗೊಂಡ ಹವಾಮಾನ ಬದಲಾವಣೆ ಒಪ್ಪಂದ ಒಂದು ಮೈಲಿಗಲ್ಲಾಗಿದ್ದು, ಇಲ್ಲಿ ಯಾರಿಗೂ ಸೋಲು ಅಥವಾ ಗೆಲುವು ಉಂಟಾಗಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ಯಾರಿಸ್ ಒಪ್ಪಂದದಲ್ಲಿ ಫಲಿತಾಂಶದಲ್ಲಿ ಯಾರಿಗೂ ಸೋಲು ಅಥವಾ ಗೆಲುವು ಉಂ ಟಾಗಿಲ್ಲ. ಹವಾಮಾನ ನೀತಿ ಗೆದ್ದುಕೊಂಡಿದೆ ಮತ್ತು ನಾವೆಲ್ಲರೂ ಭವಿಷ್ಯದಲ್ಲಿ ಹಸಿರು ಉತ್ತಮ ಪರಿಸರಕ್ಕಾಗಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಪ್ಯಾರಿಸ್ ನಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಮಾಡಲು ಮತ್ತು ಅಭಿವೃದ್ಧಿಶೀಲ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಹಾಯ ಮಾಡುವಂತೆ ಒಪ್ಪಂದದಲ್ಲಿ ಸೂಚಿಸಲಾಗಿದೆ.

ವಿಶ್ವದಲ್ಲಿ ಹವಾಮಾನ ಬದಲಾವಣೆ ಒಂದು ಸವಾಲಾಗಿದೆ. ಜಾಗತಿಕ ತಾಪಮಾನವನ್ನು ಕುಗ್ಗಿಸಿ ವಾತಾವರಣವನ್ನು ನಿರ್ಮಲಗೊಳಿಸಬೇಕೆಂದು ನಿರ್ಧರಿಸಿ ಎಲ್ಲಾ ದೇಶಗಳು ನಿರ್ಣಯ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಕೂಡ ಪ್ರಧಾನಿ ಟ್ವೀಟ್ ನಲ್ಲಿ ವಿವರಿಸಿದ್ದಾರೆ. ಹವಾಮಾನ ಬದಲಾವಣೆಗೆ ಸಾಮೂಹಿಕ ಬುದ್ಧಿವಂತಿಕೆ ತೋರಿಸುವುದು ಕೂಡ ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT