ನವದೆಹಲಿ: ಭಾರತೀಯ ಜನತಾ ಪಕ್ಷದ ಚಿಹ್ನೆಯಾದ ಕಮಲದ ಹೂವಿನ ಗುರುತನ್ನು ಅನೂರ್ಜಿತಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‍ಗೆ ಮನವಿ ಮಾಡಲಾಗಿದೆ.
ಕಮಲದ ಹೂವು ದೇವರ ಅಭಿವ್ಯಕ್ತಿ ಸೂಚಕವಾಗಿದ್ದು, ಚುನಾವಣಾ ಸಮಯದಲ್ಲಿ ಅದನ್ನು ಬಳಸುವುದು ಕಾನೂನುಬಾಹಿರ ಎಂಬ ಕಾರಣ ನೀಡಿ ಈ ಚಿಹ್ನೆ ಬಳಕೆಗೆ ಅವಕಾಶ ನೀಡಬೇಡಿ ಎಂದು ಮನವಿಯಲ್ಲಿ ಕೋರಲಾಗಿದೆ. ಎನ್‍ಜಿಒವೊಂದು ಈ ಅರ್ಜಿ ಸಲ್ಲಿಸಿದ್ದು, ನ್ಯಾ. ಜಿ.ರೋಹಿಣಿ ಮತ್ತು ನ್ಯಾ.ರಾಜೀವ್ ಸಹಾಯ ಅವರನ್ನೊಳಗೊಂಡ ಪೀಠ ಇದರ ವಿಚಾರಣೆಯನ್ನು ಜ.5ಕ್ಕೆ ನಿಗದಿಪಡಿಸಿದೆ. ಮನವಿ ಸಲ್ಲಿಸಿದವರು ಹಿಂದಿಯಲ್ಲಿ ಮಾತನಾಡಿದ್ದರಿಂದ ವಿಚಾರಣೆಯನ್ನು ಮುಂದಿನ ದಿನಾಂಕಕ್ಕೆ ನಿಗದಿಗೊಳಿಸಲಾಯಿತು ಎನ್ನಲಾಗಿದೆ.