ಆರ್ ಎಸ್ ಎಸ್ (ಸಂಗ್ರಹ ಚಿತ್ರ) 
ದೇಶ

ವಾದ್ಯಗಾರರಿಗೆ ಆರ್‍ಎಸ್‍ಎಸ್ ತರಬೇತಿ

ರಾಷ್ಟ್ರೀಯ ಸ್ವಯಂಸೇವಕಸಂಘ(ಆರಸ್ಸೆಸ್) ತನ್ನ ಸದಸ್ಯರಿಗೆ ಸಂಗೀತ ಕಲಿಸಲು ಹೊರಟಿದೆಯಾ ಇದು ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ನಾಲ್ಕುದಿನಗಳ ಶಿಬಿರದ ಒಂದು ಭಾಗ...

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕಸಂಘ(ಆರಸ್ಸೆಸ್) ತನ್ನ ಸದಸ್ಯರಿಗೆ ಸಂಗೀತ ಕಲಿಸಲು ಹೊರಟಿದೆಯಾ  ಇದು ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ನಾಲ್ಕುದಿನಗಳ ಶಿಬಿರದ ಒಂದು ಭಾಗ.

ಶಿಬಿರದಲ್ಲಿ ತನ್ನ ಶಾಖೆಗಳ ವಾದ್ಯಗಾರರಿಗೆ ತರಬೇತಿ ತರಗತಿಗಳನ್ನು ಏರ್ಪಡಿಸಿರುವ ಆರೆಸೆಸ್ ಸ್ಯಾಕ್ಸೋಫೋನ್, ಬ್ಯಾಂಡ್, ಕ್ಲಾರಿನೆಟ್, ಡ್ರಮ, ಕೊಳಲು ಟ್ರಂಪ್ ಇನ್ನಿತರ ವಾದ್ಯಗಳ ತರಬೇತಿ ನೀಡಲಿದೆ. ಶಿಬಿರದಲ್ಲಿ ಶಿಸ್ತುಬದ್ಧಸಂಗೀತ ಹಾಗೂ ಸಮನ್ವಯ ಕಾಣಬೇಕೆಂಬ ಕಾರಣಕ್ಕೆ ಈ ಕ್ಲಾಸ್  ಮಾಡಲಾಗುತ್ತಿದೆಯೆಂದು ಎಕನಾಮಿಕ್ ಟೈಮ್ಸ್ ವ ದಿತಿಳಿಸಿದೆ. ಇದರ ಲ್ಲಿ ದೇಶದ ಎಲ್ಲ ಭಾಗಗಳಿಂದ ಆರೆಸ್ಸೆಸ್ ನ ವಾದ್ಯಗಾರರು ಭಾಗವಹಿಸಲಿದ್ದಾರೆ.

5 ವರ್ಷಕ್ಕೊಮ್ಮೆ ರಾಜ್ಯಮಟ್ಟದ ಬ್ಯಾಂಡ್ ಕ್ಯಾಂಪ್ ನಡೆಸುವ ಆರೆಸ್ಸೆಸ್ ಇದೇ ಮೊದಲ ಬಾರಿ ತರಬೇತಿ ಶಿಬಿರ ನಡೆಸುತ್ತಿದೆ. ಬ್ಯಾಂಡ್ ಶಿಸ್ತುಬದ್ಧವಾದಷ್ಟೂ ಸಂಘದತ್ತ ಹೆಚ್ಚು ಮಂದಿಯನ್ನು ಸೆಳೆಯಬಹುದು ಎಂಬುದು ಲೆಕ್ಕಾಚಾರವಾಗಿದೆ. ಘೋಷ ತರಂಗ ತಂಡವನ್ನು ಇನ್ನಷ್ಟೂ ವಿಸ್ತರಿಸುವ ಯೋಜನೆಯನ್ನೂ ಇಟ್ಟುಕೊಂಡಿರುವ ಆರೆಸ್ಸೆಸ್ ಹೊಸ ವಾದ್ಯಗಳನ್ನೂ ಸೇರಿಸಲು ಉದ್ದೇಶಿಸಿದೆ.

ಬಿಜೆಪಿ ಕೇಂದ್ರದಲ್ಲಿ ಸರ್ಕಾರ ಸ್ಥಾಪಿಸಿದ ನಂತರ ಸದಸ್ಯಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದರಿಂದ ಉಪನ್ಯಾಸಕರಾಗಿರುವ ಪ್ರಚಾರಕರು ದೇಶಾದ್ಯಂತ ಈ ಕಲಿಕಾ ಶಿಬಿರ ಏರ್ಪಡಿಸಲೂ ಚಿಂತನೆ ನಡೆಸಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಒಟ್ಟು 45 ಶಿಬಿರಗಳು ನಡೆಯಲಿದ್ದು, ಎಲ್ಲಡೆ ಏಕರೀತಿಯ ಘೋಷ ರಚನೆಗಳು ಹಾಡುವ ನಿಟ್ಟಿನಲ್ಲಿ ತರಬೇತಿ ನೀಡಸಿದ್ದಾರೆ. ಆರ್ ಎಎಸ್ ಎಸ್ ಶಾಖೆಗಳಲ್ಲಿ ಶಾಸ್ತ್ರೀಯ ರಾಗದ ರಚನೆಗಳನ್ನೂ, ದೇಶಭಕ್ತಚಿ ಗೀತೆಗಳನ್ನೂ ಹಾಡಲಿದ್ದು, ಆದಕ್ಕೆ ಹೊಸ ವಾದ್ಯಗಳ ಹಿಮ್ಮೇಳ ದೊರೆಯಲಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ