ನವದೆಹಲಿ: ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ದೆಹಲಿಯ ಜನತೆ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದನ್ನು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.
ಅವರ ಪ್ರಕಾರ, ದೆಹಲಿಯಲ್ಲಿ ಓಡಾಟಕ್ಕಾಗಿ ಸಂಸದರಿಗೆ ಪ್ರಧಾನಿ ಮೋದಿ ಮುಂದಿನ ವಾರ ಎರಡು ಬ್ಯಾಟರಿ ಚಾಲಿತ ಬಸ್‍ಗಳನ್ನು ನೀಡಲಿದ್ದಾರೆ.
ಇಸ್ರೋ ತಯಾರಿಸಿರುವ ಕಡಿಮೆ ವೆಚ್ಚದ ಲೀಥಿಯಂ-ಅಯಾನ್ ಬ್ಯಾಟರಿ ಚಾಲಿತ ಈ ಬಸ್ ಗಳನ್ನು ಶೀಘ್ರವೇ ದೆಹಲಿ ನಗರದ ಸಾರ್ವಜನಿಕ ಸಂಚಾರಕ್ಕೂ ಒದಗಿಸುವ ಯೋಜನೆ ಇದ್ದು, ಪ್ರಯೋಗಾರ್ಥವಾಗಿ 15 ಬಸ್ ನೀಡುವ ಯೋಚನೆ ಇದೆ ಎಂದು ಸಚಿವರು ಹೇಳಿದ್ದಾರೆ. ಇಸ್ರೋ ವಿಜ್ಞಾನಿಗಳು ಈ ವಿಶೇಷ ಬ್ಯಾಟರಿ ಅಭಿ ವೃದ್ಧಿಪಡಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.