ನ್ಯೂಯಾರ್ಕ್: ಚುನಾಯಿತ ರಾಜಕಾರಣಿಗಳಿಗೆ ಆಯಸ್ಸು ಕ್ಷೀಣಿಸುವ ಅಪಾಯ ಹೆಚ್ಚಿರುತ್ತದೆ ಎಂಬ ಅಂಶ ಭಾರತೀಯ ಮೂಲದ ಸಂಶೋಧಕರೊಬ್ಬರ ಸಂಶೋಧನೆಯಿಂದ ಬಹಿರಂಗವಾಗಿದೆ.
ದೇಶ/ ರಾಜ್ಯಗಳ ಆಡಳಿತ ನಿರ್ವಹಿಸಲು ಚುನಾಯಿತಗೊಂಡವರು, ಚುನಾವಣೆ ಎದುರಿಸಿಯೂ ಆಯ್ಕೆಗೊಳ್ಳದ ವ್ಯಕ್ತಿಗಳಿಗಿಂತ ಅಕಾಲಿಕ ಮರಣಕ್ಕೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋಧನಾ ವರದಿ ಎಚ್ಚರಿಸಿದೆ. ಚುನಾವಣೆ ಎದುರಿಸಿ ಆಯ್ಕೆಗೊಳ್ಳದವರಿಗಿಂತ ಅಧಿಕಾರಕ್ಕೆ ಬಂದ ಅಭ್ಯರ್ಥ್ಯಿಗಳು 2 .7 ಕಡಿಮೆ ಬದುಕುತ್ತಾರೆ ಹಾಗೂ ಅಕಾಲಿಕ ಮೃತ್ಯುವಿಗೆ ತುತ್ತಾಗುವ ಅಪಾಯ ಶೇ.23 ರಷ್ಟಿರುತ್ತದೆ ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಲ್ಲಿ ಸಂಶೋಧಕರಾಗಿರುವ ಅನುಪಮ್ ಜೇನಾ ತಿಳಿಸಿದ್ದಾರೆ.
ಅತಿ ಹೆಚ್ಚು ಕೆಲಸದ ಒತ್ತಡ ಹಾಗೂ ಹಿಂದಿನ ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಇರುವ ಒತ್ತಡವೇ ಇದಕ್ಕೆ ಪ್ರಮುಖ ಕಾರಣವಂತೆ. 17 ರಾಷ್ಟ್ರಗಳಿಂದ 279 ಚುನಾಯಿತಗೊಂಡ ನಾಯಕರು ಹಾಗೂ ಚುನಾವಣೆಯಲ್ಲಿ ಪರಾಭವಗೊಂಡ 261 ಅಭ್ಯರ್ಥಿಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. 1722 ರಿಂದ 2015 ವರೆಗೂ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಸಮೀಕ್ಷೆಗೊಳಪಡಿಸಿ ಸಿದ್ಧಪಡಿಸಿರುವ ಸುದೀರ್ಘ ವರದಿ ಇದಾಗಿದ್ದು, ಬ್ರಿಟಿಶ್ ಮೆಡಿಕಲ್ ಜರ್ನಲ್(ಬಿಎಂಜೆ) ನಲ್ಲಿ ಸಂಶೋಧನಾ ವರದಿ ಕುರಿತು ಲೇಖನ ಪ್ರಕಟವಾಗಿದೆ.