ದೇಶ

34 ಇಸ್ಲಾಮಿಕ್ ರಾಷ್ಟ್ರಗಳ ಜತೆ ಸೇರಿ ಭಯೋತ್ಪಾದನೆ ನಿಗ್ರಹಕ್ಕೆ ಸೌದಿ ಪಣ

Vishwanath S
ರಿಯಾದ್: 34 ಇಸ್ಲಾಮಿಕ್ ರಾಷ್ಟ್ರಗಳ ಜತೆ ಸೇರಿ ಭಯೋತ್ಪಾದನೆ ನಿಗ್ರಹಕ್ಕೆ ಸೇನಾ ಮೈತ್ರಿ ಸ್ಥಾಪಿಸುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ.
ಸೌದಿ ಅರೇಬಿಯಾ ತಾನು ಸೇನಾ ಮೈತ್ರಿ ಮಾಡಿಕೊಳ್ಳಲಿರುವ  ರಾಷ್ಟ್ರಗಳ ಪಟ್ಟಿಯಲ್ಲಿ ಈಜಿಪ್ಟ್, ಕತ್ತಾರ್, ಯುಎಇ, ಟರ್ಕಿ, ಮಲೇಶಿಯ, ಪಾಕಿಸ್ತಾನ, ಗಲ್ಫ್ ಅರಬ್ ಹಾಗೂ ಆಫ್ರಿಕನ್ ರಾಷ್ಟ್ರಗಳು ಸೇರಿವೆ. ಈ ಮೂಲಕ ದೇಶವನ್ನೇ ನಡುಗಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದಂತೆ ಇನ್ನಿತ್ತರ ಸಂಘಟನೆಗಳ ವಿರುದ್ಧ ಜಂಟಿ ಹೋರಾಟ ಮಾಡುವುದಾಗಿ ಹೇಳಿದೆ. 
ಈ ಮೂಲಕ ಇಸ್ಲಾಮಿಕ್ ರಾಷ್ಟ್ರಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಅಮಾಯಕರ ಹತ್ಯೆ, ಶಾಂತಿ ಕದಡುವ ಗುರಿಯಿಟ್ಟುಕೊಂಡಿರುವ ಭಯೋತ್ಪಾದಕರ ಜನಾಂಗ, ಹೆಸರು ಯಾವುದೇ ಇದ್ದರೂ ಸಹ ನಾವು ಹಿಂಜರಿಯುವುದಿಲ್ಲ ಎಂದು ಹೇಳಿದೆ. 
SCROLL FOR NEXT