ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) 
ದೇಶ

ಸೋಲನ್ನು ಅರಗಿಸಿಕೊಳ್ಳಲಾಗದೇ ಕಲಾಪಕ್ಕೆ ಅಡ್ಡಿ: ಪ್ರಧಾನಿ ಮೋದಿ ಕಿಡಿ

ಕೆಲವರು ಚುನಾವಣಾ ಸೋಲಿನಿಂದ ಕಂಗೆಟ್ಟಿದ್ದು, ನಾವು ಸೋತಿರಬಹುದು; ಆದರೆ, ದೇಶಕ್ಕೆ ಏನಾದರೂ ಆಗಲಿ, ಸಂಸತ್ ಕಲಾಪ ನಡೆಯಲು ಬಿಡಲಾರೆವೆಂದು ನಿರ್ಧರಿಸಿಬಿಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ...

ಕೊಲ್ಲಂ(ಕೇರಳ): ಕೆಲವರು ಚುನಾವಣಾ ಸೋಲಿನಿಂದ ಕಂಗೆಟ್ಟಿದ್ದು, ನಾವು ಸೋತಿರಬಹುದು; ಆದರೆ, ದೇಶಕ್ಕೆ ಏನಾದರೂ ಆಗಲಿ, ಸಂಸತ್ ಕಲಾಪ ನಡೆಯಲು ಬಿಡಲಾರೆವೆಂದು ನಿರ್ಧರಿಸಿಬಿಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಇಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಆರ್ ಶಂಕರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಬಗ್ಗೆ ಯಾವುದೇ ಕಾಳಜಿಯಿಲ್ಲದ ಕೆಲವರು,  ಸಂಸತ್ ಕಲಾಪವನ್ನು ಹಾಳುಗೆಡವುವ ಹಠಕ್ಕೆ ಬಿದ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಹಿಂದಿನ ರಾಷ್ಟ್ರಪತಿಗಳ ಮಾತುಗಳನ್ನು ಆಗಾಗ ಉಲ್ಲೇಖಿಸುವ ಕೆಲವು ನಾಯಕರು, ಮೊನ್ನೆ  ಕೋಲ್ಕತಾದಲ್ಲಿ ರಾಷ್ಟ್ರಪತಿ ಮುಖರ್ಜಿಯವರು ಸಂಸತ್ ಸುಗಮ ಕಲಾಪಕ್ಕೆ ಹೇಳಿದ 3ಡಿ ಸೂತ್ರದ ಬಗ್ಗೆ ಯೋಚಿಸಬೇಕಿದೆ. ವಾಗ್ವಾದ, ಭಿನ್ನಾಭಿಪ್ರಾಯ ಮತ್ತು ಚರ್ಚೆಯ ಮೂಲಕ ಕಲಾಪ  ನಡೆಯಬೇಕು ಎಂದಿದ್ದಾರೆ. ಆದರೆ, ಕೆಲವರು ಕೇವಲ ಒಂದು `ಡಿ'ಯನ್ನು ಮಾತ್ರ ಅನುಸರಿಸುತ್ತಿದ್ದಾರೆ. ಅದು ಕಲಾಪ ಹಾಳುಗೆಡವುವುದು ಎಂದಷ್ಟೇ ಅರ್ಥ ಎಂದು ಮೋದಿ, ಕಾಂಗ್ರೆಸ್ ಹೆಸರು  ಹೇಳದೇ ಹರಿಹಾಯ್ದಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣ ಹಾಗೂ ಇತರ ಕೆಲವು ವಿಷಯಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ಚಳಿಗಾಲದ ಅಧಿವೇಶನಕ್ಕೆ ತಡೆಯೊಡ್ಡುತ್ತಿವೆ. ಡಿ.23ರಂದು ಅಂತ್ಯವಾಗುವ  ಈ ಅಧಿವೇಶನದಲ್ಲಿ ಈವರೆಗೆ ಸರಿಯಾಗಿ ಕಲಾಪ ನಡೆಯದ ಹಿನ್ನೆಲೆಯಲ್ಲಿ ಅನುಮೋದನೆಗೆ ಕಾದಿರುವ ಜಿಎಸ್‍ಟಿ ಮತ್ತಿತರ ಪ್ರಮುಖ ಮಸೂದೆಗಳ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ.  ಈ ಹಿನ್ನೆಲೆಯಲ್ಲಿ ಪ್ರಧಾನಿಯ ಈ ಮಾತುಗಳು ಮಹತ್ವ ಪಡೆದುಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ

‘Gen Z ಪ್ರತಿಭಟನೆಗಳಿಂದ ಮೋದಿ ಸರ್ಕಾರಕ್ಕೆ ನಡುಕ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ