ವಾಷಿಂಗ್ಟನ್: ವೃತ್ತಿಪರರಿಗೆ ನೀಡುವ ಎಚ್1ಬಿ ವೀಸಾ ಮೇಲೆ ಅಮೆರಿಕ ಮತ್ತೆ 2,000 ಡಾಲರ್ ವಿಶೇಷ ತೆರಿಗೆ ವಿಧಿಸುವ ಸಾಧ್ಯತೆಗಳಿವೆ.
ಎಚ್1ಬಿ ವೀಸಾವನ್ನು ಭಾರತದ ಐಟಿ ಕಂಪನಿಗಳು ಅತಿ ಹೆಚ್ಚು ಬಳಕೆ ಮಾಡುತ್ತಿದ್ದು ಇದರಿಂದ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ನಾಸ್ಕಾಂನ ಸತತ ಒತ್ತಡದ ನಂತರ ಇತ್ತೀಚೆಗೆ ಕೇಂದ್ರ ಸರ್ಕಾರ ಅಮೆರಿಕದೊಂದಿಗೆ ಮಾತುಕತೆ ನಡೆಸಿ ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆದಿತ್ತು. ಆದರೆ ಅಲ್ಲಿನ ಸಂಸದರು ಜೇಮ್ಸ್ ಜರ್‍ದೋಗ 9/11 ಆರೋಗ್ಯ ಮತ್ತು ಪರಿಹಾರ ನಿಧಿಗೆ ಹಣ ಸಂಗ್ರಹಿಸಲು ಎಚ್1ಬಿ ವೀಸಾ ಮೇಲೆ ತೆರಿಗೆ ವಿಧಿಸಲು ಒತ್ತಾಯ ಹೇರಿದ್ದಾರೆ.