ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಚೆನ್ನೈನಲ್ಲಿರುವ ಚಿದಂಬರಂ ಕಚೇರಿ ಮೇಲೆ ದಾಳಿ

ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಚೆನ್ನೈ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ದಾಳಿ...

ಕಾರ್ತಿ ಚಿದಂಬರಂ
Mainashree
Updated On : 17 Dec 2015, 9:23 am
ನವದೆಹಲಿ: ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಚೆನ್ನೈ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. 
ಕಾರ್ತಿ ಚಿದಂಬರಂ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿರುವ ವಾಸನ್‌ ಹೆಲ್ತ್‌ಕೇರ್‌ ಮತ್ತು ಅಡ್ವಾಂಟೇಜ್ ಸ್ಟ್ರ್ಯಾಟಜಿಕ್ ಕನ್ಸಲ್ಟಿಂಗ್‌ ಕಂಪೆನಿಗಳಲ್ಲಿ ನಡೆದಿರುವ ವಿದೇಶಿ ವಿನಿಮಯ ಅಕ್ರಮಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ. 
ಚೆನ್ನೈನಲ್ಲಿರುವ ಚೆಸ್‌ ಗ್ಲೋಬಲ್‌ ಅಡ್ವೈಸರಿ ಸರ್ವೀಸಸ್‌ ಪ್ರೈವೆಟ್‌ ಲಿಮಿಟೆಡ್‌ ಕಚೇರಿ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಪಡಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

Advertisement

Advertisement

ಕಚೇರಿಗೆ ಧಿಡೀರ್ ಎಂದು ಅಧಿಕಾರಿಗಳು ದಾಳಿ ಮಾಡಿದ್ದಾರೆ. ನನಗಾಗಲಿ ಅಥವಾ ನನ್ನ ಕುಟುಂಬದ ಸದಸ್ಯರಿಗೆ ಇತರೆ ಸಂಸ್ಥೆಗಳ ಜೊತೆ ಸಂಪರ್ಕವಿಲ್ಲ. ಇತರೆ ಕಂಪನಿಗಳೊಡನೆ ಯಾವುದೇ ಒಪ್ಪಂದವನ್ನು ನಾವು ಮಾಡಿಕೊಂಡಿಲ್ಲ. ಹೀಗಾಗಿ ಯಾವುದೇ ಅಕ್ರಮವೆಸಗಲು ಸಾಧ್ಯವಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಕಾರ್ತಿ ಚಿದಂಬರಂ ಅವರು ಸ್ಪಷ್ಟನೇ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement