ನವದೆಹಲಿ: ರೈಲು ಬೋಗಿಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಕಳೆದ ಒಂದು ವರ್ಷದಲ್ಲಿ 54 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 51 ಆರೋಪಿಗಳನ್ನು ಬಂಧಿಸಲಾಗಿದೆ.
2014 ರಲ್ಲಿ 20 ಅತ್ಯಾಚಾರ ಪ್ರಕರಣಗಳು ರೈಲು ಬೋಗಿಗಳಲ್ಲಿ ನಡೆದಿದ್ದರೆ, 14 ಪ್ರಕರಣಗಳು ರೈಲ್ವೆ ನಿಲ್ದಾಣದಲ್ಲಿ ನಡೆದಿವೆ. ಈ ವರ್ಷದ ನವೆಂಬರ್ ವರೆಗೆ 34 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು ಒಂದು ವರ್ಷದಲ್ಲಿ ಒಟ್ಟು 54 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ಮನೋಜ್ ಸಿನ್ಹಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ 21 ಆರೋಪಿಗಳನ್ನು ಕಳೆದ ವರ್ಷವೇ ಬಂಧಿಸಲಾಗಿದ್ದು 2015 ರ ನವೆಂಬರ್ ವರೆಗೂ 30 ಜನರನ್ನು ಬಂಧಿಸಲಾಗಿದೆ ಎಂದು ಸಿನ್ಹಾ ಮಾಹಿತಿ ನೀಡಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ರೈಲ್ವೆ ಇಲಾಖೆ ರೈಲ್ವೆ ರಕ್ಷಣಾ ಪಡೆಯನ್ನು ನಿಯೋಜನೆ ಮಾಡಲಿದೆ ಎಂದು ಹೇಳಿದ್ದಾರೆ.