ದೇಶ

ದೇಶಾದ್ಯಂತ ಇಎಸ್‍ಐ ವೈದ್ಯ ಸೌಲಭ್ಯ ವಿಸ್ತರಣೆಗೆ ನಿರ್ಧಾರ

Mainashree

ನವದೆಹಲಿ: ದೇಶಾದ್ಯಂತ ಇಎಸ್‍ಐ ಸೌಲಭ್ಯವನ್ನು ವಿಸ್ತರಿಸಲು ಇಎಸ್ ಐಸಿ ಸಂಸ್ಥೆ ಶುಕ್ರವಾರ ನಿರ್ಧರಿಸಿದೆ. 

ಇದೇ ಸಂದರ್ಭದಲ್ಲಿ 2.03 ಕೋಟಿ ಸದಸ್ಯರಿಗೆ ಸೇವೆ ಕಲ್ಪಿಸಲು ಪ್ರತಿ ರಾಜ್ಯದಲ್ಲೂ ಸಂಸ್ಥೆಗಳನ್ನು ಸ್ಥಾಪಿಸಲು ಉನ್ನತ ಮಟ್ಟದ ಸಮಿತಿ ರಚಿಸಿದೆ. ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇ ಯ ನೇತೃತ್ವದಲ್ಲಿ ನಡೆದ 167ನೇ ಸಭೆ ಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ. 
ಸದ್ಯ ಇಎಸ್‍ಐ ಸೌಲಭ್ಯವನ್ನು ದೇಶದ 393 ರಾಜ್ಯಗಳಲ್ಲಿ ಕೈಗಾ ರಿಕಾ ಮತ್ತು ವಾಣಿಜ್ಯ ಸಂಕೀರ್ಣಗಳು ಇರುವ ಕಡೆಗಳಲ್ಲಿ ಮಾತ್ರ ಸ್ಥಾಪಿಸಲಾಗಿದೆ. ದೇಶಾದ್ಯಂತ ವಿಸ್ತರಿಸಬೇಕೆಂದು ಬಹಳ ಹಿಂದಿನಿಂದಲೂ ಬೇಡಿಕೆ ಇದೆ. ಆದರೆ ಇದುವರೆಗೂ ಜಾರಿಯಾಗಿಲ್ಲ. 
ಇದುವರೆಗೂ ಯೋಜನೆ ಜಾರಿ ಗೊಳಿಸದಿರುವ 271 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಮೊದಲಿಗೆ ಆಯ್ದ ವೈದ್ಯರು, ಸಂಸ್ಥೆಗಳ ಮೂಲಕ ಸೇವೆಗಳನ್ನು ನೀಡಲಾಗುವುದು. ನಂತರ ಅಗತ್ಯಕ್ಕೆ ಅನುಗುಣವಾಗಿ ಹೊಸ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು. 
ಹೊಸ ಸಂರಚನೆ ರೂಪಿಸಲು ಮಾರ್ಗಸೂಚಿ ರೂಪಿಸಲು ಉಪ ಸಮಿತಿಯನ್ನು ರಚಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ.
SCROLL FOR NEXT