ದೇಶ

2020ಕ್ಕೆ ಭಾರತದ ಮೇಲೆ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಸಂಚು

Vishwanath S

ಪುಣೆ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪ್ರಚಾರದ ಪ್ರಭಾವಕ್ಕೆ ಸಿಕ್ಕಿ ಸಿರಿಯಾಗೆ ಹೋಗಲು ಯೋಜನೆ ಹೂಡಿದ್ದ ಪುಣೆಯ 16ರ ಹರೆಯದ ಮುಸ್ಲಿಂ ಹುಡುಗಿಯನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ಬಾಲಕಿ ಆಘಾತಕಾರಿ ವಿಷಯಗಳನ್ನು ಬಾಯ್ಬಿಟ್ಟಿದ್ದು, 2020ರ ವೇಳೆ ಭಾರತದ ಮೇಲೆ ದಾಳಿಗೆ ಇಸಿಸ್ ಸಂಚು ರೂಪಿಸಿದೆ ಎಂದು ಹೇಳಿದ್ದಾಳೆ.

ಸಿರಿಯಾ ಮತ್ತು ಇರಾಕ್‌ನಾಚೆ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಇಸಿಸ್ ಸಿದ್ಧತೆ ನಡೆಸುತ್ತಿದೆ. 2020ರ ವೇಳೆಗೆ ಭಾರತದ ಮೇಲೆ ದಾಳಿ ನಡೆಸುವ ಇರಾದೆ ಇಸಿಸ್ ಗಿದೆ' ಎಂದು ಆಕೆ ಹೇಳಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತ ತೊರೆದು ಮುಂದಿನ ವರ್ಷ ಸಿರಿಯಾಗೆ ಹೋಗಲು ಈಕೆ ಚಿಂತನೆ ನಡೆಸಿದ್ದಳು ಭಯೋತ್ಪಾದಕ ನಿಗ್ರಹ ದಳ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಆಕೆ ಸಂಪರ್ಕದಲ್ಲಿರುವ 20 ಮಂದಿಯ ಹೆಸರನ್ನು ಬಾಯ್ಬಿಟ್ಟಿದ್ದಾಳೆ. ಇಸಿಸ್ ಈಕೆಯನ್ನು ಆತ್ಮಾಹುತಿ ಬಾಂಬರ್‌ ಮಾಡಲು ಯೋಚಿಸಿತ್ತು ಎಂದು ತಿಳಿದುಬಂದಿದೆ.

SCROLL FOR NEXT