ಬಿಎಸ್ ಎನ್ ಎಲ್ (ಸಂಗ್ರಹ ಚಿತ್ರ) 
ದೇಶ

ಬಿಎಸ್ಸೆನ್ನೆಲ್ ದರ 80% ಕಡಿತ

ಹೊಸ ಗ್ರಾಹಕರಿಗೆ ಬಿಎಸ್ಸೆನ್ನೆಲ್ ಹೊಸ ವರ್ಷಕ್ಕಾಗಿ ಭರ್ಜರಿ ಕೊಡುಗೆ ನೀಡಿದೆ. ಗ್ರಾಹಕರನ್ನು ಸೆಳೆಯುವ ಪ್ರಯತ್ನವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಮೊಬೈಲ್ ಕರೆ ದರಗಳನ್ನು ಶೇ.80ರಷ್ಟು ಕಡಿತಗೊಳಿಸಿದ್ದು...

ನವದೆಹಲಿ: ಹೊಸ ಗ್ರಾಹಕರಿಗೆ ಬಿಎಸ್ಸೆನ್ನೆಲ್ ಹೊಸ ವರ್ಷಕ್ಕಾಗಿ ಭರ್ಜರಿ ಕೊಡುಗೆ ನೀಡಿದೆ. ಗ್ರಾಹಕರನ್ನು ಸೆಳೆಯುವ ಪ್ರಯತ್ನವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಮೊಬೈಲ್ ಕರೆ ದರಗಳನ್ನು ಶೇ.80ರಷ್ಟು ಕಡಿತಗೊಳಿಸಿದ್ದು, ಈ ಸೌಲಭ್ಯ ಹೊಸ ಗ್ರಾಹಕರಿಗೆ ಮೊದಲ 2 ತಿಂಗಳು ಮಾತ್ರ ಲಭ್ಯವಾಗಲಿದೆ.

ಬಿಎಸ್‍ಎನ್‍ಎಲ್ ಸಂಪರ್ಕ ಪಡೆಯಲು ಇಚ್ಛಿಸುವ ಹೊಸ ಗ್ರಾಹಕರು ಪರ್ ಸೆಕೆಂಡ್ ಪ್ಲ್ಯಾನ್‍ನಲ್ಲಿ ರು.36ರ ವೋಚರ್ ಹಾಗೂ ಪರ್ ಮಿನಿಟ್ ಪ್ಲ್ಯಾನ್‍ನಲ್ಲಿ ರು.37ರ ವೋಚರ್ ಅನ್ನು  ಪಡೆಯಬೇಕು. ರು.37ರ ವೋಚರ್ ಪಡೆದವರಿಗೆ ಬಿಎಸ್ಸೆನ್ನೆಲ್ ಟು ಬಿಎಸ್ಸೆನ್ನೆಲ್‍ಗೆ ಸ್ಥಳೀಯ ಹಾಗೂ ಎಸ್‍ಟಿಡಿ ಕರೆ ದರ ನಿಮಿಷಕ್ಕೆ 10 ಪೈಸೆ ಮಾತ್ರ. ಇತರೆ ನೆಟ್‍ವರ್ಕ್‍ಗೆ ನಿಮಿಷಕ್ಕೆ 30  ಪೈಸೆ ಇರುತ್ತದೆ. ಅಂತೆಯೇ, ರು.36 ರೀಚಾರ್ಜ್ ಪಡೆದವ ರಿಗೆ ಬಿಎಸ್ಸೆನ್ನೆಲ್ ನೆಟ್‍ವರ್ಕ್‍ನಲ್ಲಿ ಸ್ಥಳೀಯ ಹಾಗೂ ಎಸ್‍ಟಿಡಿ ಕರೆಗಳಿಗೆ ಪ್ರತಿ 3 ಸೆಕೆಂಡಿಗೆ 1 ಪೈಸೆ ತಗುಲಿದರೆ, ಇತರೆ  ನೆಟ್‍ವರ್ಕ್‍ಗೆ ಪ್ರತಿ 3 ಸೆಕೆಂಡಿಗೆ 2 ಪೈಸೆ ತಗಲುತ್ತದೆ ಎಂದು ಬಿಎಸ್ಸೆನ್ನೆಲ್ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel