ನವದೆಹಲಿ: ದೆಹಲಿಯ ಜ್ಯೋತಿ ಸಿಂಗ್ ಮೇಲೆ ಅತ್ಯಾಚಾರವೆಸಗಿದ್ದ ಬಾಲಾಪರಾಧಿಯನ್ನು ಮೊನ್ನೆ ಶಿಕ್ಷೆಯಿಂದ ಬಿಡುಗಡೆ ಮಾಡಿದ ನಂತರ ಬಾಲಾಪರಾಧ ಮಸೂದೆ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ.
ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿ ರಾಜ್ಯ ಸಭೆಯಲ್ಲಿ ಇಂದು ಅನುಮೋದನೆಗೆ ಕಾದು ಕುಳಿತಿರುವ ಬಾಲಾಪರಾಧ ನ್ಯಾಯ ಮಸೂದೆ 2015 ಸುದ್ದಿ ಮಾಡಿದೆ. ಈ ಮಸೂದೆಯ ಉದ್ದೇಶ ಏನು, ಸ್ವರೂಪ ಹೇಗೆ ಎಂಬುದರ ಬಗ್ಗೆ ಸ್ವಲ್ಪ ಮಾಹಿತಿ-
- 16ರಿಂದ 18 ವರ್ಷದವರೆಗಿನವರನ್ನು ವಯಸ್ಕರೆಂದು ಪರಿಗಣಿಸಿ ಅತ್ಯಾಚಾರ, ಕೊಲೆ ಇತ್ಯಾದಿ ಘೋರ ಕೃತ್ಯಗಳನ್ನು ಎಸಗಿದವರಿಗೆ ಶಿಕ್ಷೆ ವಿಧಿಸಬೇಕು ಎಂಬುದಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಮಸೂದೆ ಕಳೆದ ಬಜೆಟ್ ಅಧಿವೇಶನದ ನಂತರ ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಕ್ಕದೆ ಹಾಗೆಯೇ ಇದೆ.
- 18 ವರ್ಷಕ್ಕಿಂತ ಕೆಳಗಿನವರನ್ನು ಬಾಲಕರು ಎಂದು ಪರಿಗಣಿಸುತ್ತಾರೆ. ಭಾರತೀಯ ದಂಡ ಸಂಹಿತೆ ಪ್ರಕಾರ ಮಕ್ಕಳಿಗೆ ಏಳು ವರ್ಷದವರೆಗೆ ಅವರನ್ನು ಯಾವುದೇ ಅಪರಾಧ ಶಿಕ್ಷೆಗೆ ಗುರಿಪಡಿಸುವಂತಿಲ್ಲ.
- ಈಗಿರುವ ಕಾನೂನಿನ ಪ್ರಕಾರ 16ರಿಂದ 18 ವರ್ಷದವರೆಗಿನವರಿಗೆ ತಪ್ಪು ಮಾಡಿದಲ್ಲಿ ಸರಿಯಾದ ಶಿಕ್ಷೆ ನೀಡಲಾಗುತ್ತಿಲ್ಲ. ಅವರು ಕಾನೂನಿನ ಶಿಕ್ಷೆಯಿಂದ ಬಹಳ ಬೇಗನೆ ನುಣುಚಿಕೊಳ್ಳುತ್ತಿದ್ದಾರೆ.
- ದೆಹಲಿಯ ನಿರ್ಭಯಾ(ಜ್ಯೋತಿ ಸಿಂಗ್) ಪ್ರಕರಣದ ನಂತರ ಬಾಲಾಪರಾಧಿಗಳೆಂದು 18 ವರ್ಷಕ್ಕೆ ಬದಲಾಗಿ 16 ವರ್ಷಕ್ಕೆ ಇಳಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಹೊಸ ಬಾಲಾಪರಾಧ ಮಸೂದೆಯನ್ನು ಜಾರಿಗೆ ತರುತ್ತಿದೆ.
- ಹೊಸ ಬಾಲಾಪರಾಧ ಮಸೂದೆ ಪ್ರಕಾರ, 16ರಿಂದ 18 ವರ್ಷದೊಳಗಿನವರು ಘೋರ ಅಪರಾಧ ಎಸಗಿದಲ್ಲಿ ಕನಿಷ್ಠ 7 ವರ್ಷಗಳವರೆಗೆ ಜೈಲು, ಗಂಭೀರ ಅಪರಾಧ ಎಸಗಿದರೆ 3ರಿಂದ 7 ವರ್ಷದವರೆಗೆ ಮತ್ತು ಸಣ್ಣಪುಟ್ಟ ಅಪರಾಧ ಎಸಗಿದರೆ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಈ ನೂತನ ಮಸೂದೆ ಬಾಲಾಪರಾಧ ನ್ಯಾಯ(ಜಾಗ್ರತೆ ಮತ್ತು ರಕ್ಷಣೆ) ಕಾಯ್ದೆ 2000ಕ್ಕೆ ಬದಲಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics