ನೋಯ್ಡಾ: ಉತ್ತರ ಪ್ರದೇಶದಲ್ಲಿ ಗೋಮಾಂಸ ಸಂಗ್ರಹಿಸಿದ ವದಂತಿಯಿಂದ ರೊಚ್ಚಿಗೆದ್ದ ಜನ-ಸಮೂಹವೊಂದು ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿದಂತೆ 15 ಮಂದಿ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಆದರೆ ಚಾರ್ಜ್ ಶೀಟ್ ನಲ್ಲಿ ಗೋಮಾಂಸವನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 28ರಂದು ದಾದ್ರಿಯ ಬಿಶಾಡಾ ಗ್ರಾಮದಲ್ಲಿ ಗೋಮಾಂಸ ಸಂಗ್ರಹಿಸಿದ ಆರೋಪದ ಮೇಲೆ ಮೊಹಮ್ಮದ್ ಇಖಲಾಕ್ ಅವರನ್ನು ಮನೆಯಿಂದ ಕರೆತಂದು ಚಚ್ಚಿ ಸಾಯಿಸಲಾಗಿತ್ತು. ಅಲ್ಲದೆ ಇಖಲಾಕ್ ಅವರ ಪುತ್ರ ದನಿಶ್ ಮೇಲೂ ಹಲ್ಲೆ ನಡೆಸಲಾಗಿತ್ತು.
ಈ ಸಂಬಂಧ ಇಖಲಕ್ ಅವರ ಪುತ್ರಿಯ ಹೇಳಿಕೆಯನ್ನು ಆಧರಸಿ ಉತ್ತರ ಪ್ರದೇಶದ ಪೊಲೀಸರು ಇದುವರೆಗೆ 15 ಮಂದಿಯನ್ನು ಬಂಧಿಸಿದ್ದಾರೆ.
ಸದ್ಯ ಇಖಲಕ್ ಕುಟುಂಬ ಚೆನ್ನೈಯಲ್ಲಿ ವಾಸಿಸುತ್ತಿದೆ.