ನವದೆಹಲಿ:16 ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನದ ವೇಳೆಗೆ ರಷ್ಯಾಗೆ ತೆರಳಲಿದ್ದಾರೆ. ರಷ್ಯಾ ಭೇಟಿಯ ಎರಡನೇ ದಿನದಂದು ಸಭೆ ಪ್ರಾರಂಭವಾಗಲಿದ್ದು, ರಷ್ಯಾ ಹಾಗೂ ಭಾರತದ ಸಿಇಒ ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಹನ ನಡೆಸಲಿದ್ದಾರೆ. ಇದೇ ವೇಳೆ ನಾಗರಿಕ ವಿಪತ್ತುಗಳನ್ನು ನಿರ್ವಹಿಸುವ ಇಲಾಖೆ (EMERCOM ) ಗೂ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ರಷ್ಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಕಳೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿದ್ದರು. ರಷ್ಯಾ ಭಾರತದಲ್ಲಿ ಈಗಾಗಲೇ 12 ಅಣು ಶಕ್ತಿಯ ಘಟಕಗಳನ್ನು ನಿರ್ಮಾಣ ಮಾಡುತ್ತಿದ್ದು, ಈ ಬಗ್ಗೆ ಮತ್ತಷ್ಟು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ರಷ್ಯಾದಿಂದ ವಾಪಸ್ಸಾಗುವ ವೇಳೆ ಪ್ರಧಾನಿ ನರೇಂದ್ರ ಮೋದಿ ಕಾಬುಲ್ ಗೆ ಭೇಟಿ ನೀಡುವ ಸಾಧ್ಯತೆಯೂ ಇದೆ.