ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನಾಳೆಯಿಂದ ರೇಲ್ವೇ ತತ್ಕಾಲ್ ಟಿಕೆಟ್ ದರ ಏರಿಕೆ

ಪ್ರಯಾಣಿಕರಿಂದ ಹೆಚ್ಚಿನ ವರಮಾನ ಗಳಿಸುವ ಉದ್ದೇಶದಿಂದ ಭಾರತೀಯ ರೇಲ್ವೇ ಇಲಾಖೆ ತತ್ಕಾಲ್ ಟಿಕೆಟ್ ದರವನ್ನು ಏರಿಕೆ ಮಾಡಲು ತೀರ್ಮಾನಿಸಿದೆ...

ಭಾರತೀಯ ರೇಲ್ವೇ
Rashmi Kasaragodu
Updated On : 24 Dec 2015, 3:16 am
ನವದೆಹಲಿ: ಪ್ರಯಾಣಿಕರಿಂದ ಹೆಚ್ಚಿನ ವರಮಾನ ಗಳಿಸುವ ಉದ್ದೇಶದಿಂದ ಭಾರತೀಯ ರೇಲ್ವೇ ಇಲಾಖೆ ತತ್ಕಾಲ್ ಟಿಕೆಟ್ ದರವನ್ನು ಏರಿಕೆ ಮಾಡಲು ತೀರ್ಮಾನಿಸಿದೆ.
ಪರಿಷ್ಕೃತ ದರ ನಾಳೆ (ಡಿಸೆಂಬರ್ 25) ರಿಂದ ಚಾಲ್ತಿಗೆ ಬರಲಿದೆ.
ತತ್ಕಾಲ್ ಪರಿಷ್ಕೃತ ದರದ ಪಟ್ಟಿ ಇಂತಿದೆ

Advertisement

Advertisement

ರು. 175 ಇದ್ದ ಸ್ಲೀಪರ್ ಕ್ಲಾಸ್ ತತ್ಕಾಲ್ ಬುಕಿಂಗ್ ಮಾಡಬೇಕಾದರೆ ರು. 200 ತೆರಬೇಕಾಗುತ್ತದೆ.
ಎಸಿ-3 ರು. 350 ಇದ್ದದ್ದು ರು. 400 ಆಗಿ ಏರಿಕೆ. ಕನಿಷ್ಠ  ರು. 250 ಇದ್ದದ್ದು ರು. 300 ಆಗಿ ಏರಿಕೆ
ಸ್ಲೀಪರ್ ಕ್ಲಾಸ್ ತತ್ಕಾಲ್ ಕನಿಷ್ಠ ದರ ರು. 90 ಇದ್ದದ್ದು ರು. 100 ಆಗಿ ಏರಿಕೆ.
ಪ್ರಯಾಣದ ದೂರ ಅವಲಂಬಿಸಿ ಕನಿಷ್ಠ ಮತ್ತು ಗರಿಷ್ಠ ದರಗಳಲ್ಲಿ ಬದಲಾವಣೆ ಮಾಡಲಾಗಿದೆ.
ಎಸಿ ಕ್ಲಾಸ್ ಗೆ ಮಾತ್ರ ಈಗ ದರ ಏರಿಕೆ ಮಾಡಿದ್ದು ಸೆಕೆಂಡ್ ಕ್ಲಾಸ್ ತತ್ಕಾಲ್ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ.
ಎಸಿ 2 ಪ್ರಯಾಣಿಕರಿಗೆ ಕನಿಷ್ಠ ತತ್ಕಾಲ್ ಟಿಕೆಟ್ ದರ ರು. 300 ರಿಂದ ರು. 400 ಆಗಿದ್ದು, ಗರಿಷ್ಠ ತತ್ಕಾಲ್ ದರ ರು. 400 ಇದ್ದದ್ದು ರು. 500 ಆಗಿ ಏರಿಕೆಯಾಗಿದೆ.
ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರಿಗೆ ಕನಿಷ್ಠ ದರ ರು. 300 ಇದ್ದದ್ದು ರು. 400 ಆಗಿದ್ದು, ಗರಿಷ್ಠ ದರ ರು. 400 ಇದ್ದದ್ದು ರು. 500 ಆಗಿ ಏರಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments