ನವದೆಹಲಿ: ಕರುಗಳ ಜೊತೆ ಸೆಕ್ಸ್ ಮಾಡುತ್ತಿದ್ದ 18 ವರ್ಷದ ದೆಹಲಿ ಯುವಕನೊಬ್ಬ, ಮಾನಸಿಕ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ನಜಫ್‌ಗರದ ಡೈರಿ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಈ ಯುವಕ ಕರುಗಳ ಜತೆ ಸೆಕ್ಸ್ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಐಪಿಸಿ ಸೆಕ್ಸೆನ್ 377ರ ಪ್ರಕಾರ ಪ್ರಾಣಿಗಳಂತೆ ವರ್ತಿಸುವುದು ಶಿಕ್ಷಾರ್ಹ ಅಪರಾಧ.
ಈ ವರ್ಷ ದೇಶದಲ್ಲಿ ಇಂತಹ ಘಟನೆ ವರದಿಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಉತ್ತರ ಪ್ರದೇಶ ಅಹಮ್ಮದ್‌ಗಢದಲ್ಲಿ ಇಂತಹದ್ದೆ ಪ್ರಕರಣ ನಡೆದಿತ್ತು. 25 ವರ್ಷದ ವ್ಯಕ್ತಿಯೊಬ್ಬ ಏಳು ತಿಂಗಳ ಕರುವಿನ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಿಸಲಾಗಿತ್ತು.