ನವದೆಹಲಿ: ಜನನ, ಮರಣ ಪ್ರಮಾಣಪತ್ರ ಸೇರಿದಂತೆ ಬಹುತೇಕ ಸೇವೆಗಳ ಅರ್ಜಿಗಳು ಸರಳೀಕೃತಗೊಳ್ಳಲಿದ್ದು, ಇನ್ನು ಮುಂದೆ ಒಂದು ಪುಟದ ಅರ್ಜಿಯಾಗಿ ಬದಲಾಗಲಿವೆ.
`ಉತ್ತಮ ಆಡಳಿತ ದಿನ' ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ದಿನವೂ ಆದ ಶುಕ್ರವಾರ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು `ಪಿಂಚಣಿದಾರರಿಗೆ ಒಂದು ಪುಟ ಅರ್ಜಿಯನ್ನು' ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದೆ, ವಿವಿಧ ಯೋಜನೆಗಳಿಗೆ ದೊಡ್ಡ ಪ್ರಮಾಣದ ಅರ್ಜಿಗಳನ್ನು ತುಂಬಿಸಬೇಕಾದ ಅಗತ್ಯವಿರುವುದಿಲ್ಲ. ಇಂದು ನಾವು ಪಿಂಚಣಿದಾರರಿಗೆ ಒಂದು ಪುಟದ ಅರ್ಜಿಯನ್ನು ಪರಿಚಯಿಸುತ್ತಿದ್ದೇವೆ. ಮುಂದಿನ ಒಂದು ವರ್ಷದೊಳಗಾಗಿ ಎಲ್ಲ ಬಹು ಪುಟಗಳ ಅರ್ಜಿಗಳನ್ನು ಒಂದೇ ಪುಟವನ್ನಾಗಿ ಬದಲಾಯಿಸಲಿದ್ದೇವೆ ಎಂದು ಸಿಂಗ್ ತಿಳಿಸಿದ್ದಾರೆ.