ದೇಶ

ದೇವನೂರು ಮಹಾದೇವ ವ್ಯವಸ್ಥೆ ಪರ: ಭಗವಾನ್ ಕಿಡಿ

Srinivas Rao BV

ಹೊಸಪೇಟೆ: ಲೇಖಕ ದೇವನೂರು ಮಹಾದೇವ ಅವರು ವ್ಯವಸ್ಥೆಯ ಪರವಾಗಿದ್ದಾರೆ ಎಂದು ಮೈಸೂರಿನ ಚಿಂತಕ, ಲೇಖಕ ಪ್ರೊ. ಕೆ.ಎಸ್. ಭಗವಾನ್ ದೂರಿದರು.

ಹಂಪಿಯಲ್ಲಿ ಭಾನುವಾರ 2ನೇ ಆಖಿಲ ಭಾರತ ಜನಸಾಂಸ್ಕೃತಿಕ ಮೇಳ ಉದ್ಘಾಟಿಸಿ ಮಾತನಾಡಿ, ನನ್ನ ಆತ್ಮೀಯರೇ ಆಗಿರುವ ದೇವನೂರು ಮಹಾದೇವ ಇತ್ತೀಚೆಗೆ ಭಗವದ್ಗೀತೆಯನ್ನು ಸಮರ್ಥಿಸಿಕೊಂಡು ಅದರ ಶುದ್ಧೀಕರಣಕ್ಕೆ ಮುಂದಾಗಿದ್ದಾರೆ.

ಭಗವದ್ಗೀತೆಯ ಎಲ್ಲ ಅಂಶಗಳು ಸಮಾನತೆಯ ವಿರೋಧಿ ಎಂಬುದನ್ನು ಈಗಾಗಲೇ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬುದ್ಧ ಕಂಡುಕೊಂಡಿದ್ದಾರೆ. ದೇವನೂರು ಮಹದೇವ ಅವರು ಭಗವದ್ಗೀತೆಯಲ್ಲಿರುವ ಕೆಟ್ಟ ಅಂಶಗಳನ್ನು ತೆಗೆದು ಹಾಕಬೇಕು ಎನ್ನುವ ಮೂಲಕ ಅದರಲ್ಲೂ ಉತ್ತಮ ಅಂಶಗಳಿವೆ ಎಂಬುದನ್ನು ಪ್ರತಿಪಾದಿಸಲು ಹೊರಟಿದ್ದಾರೆ. ಅವರು ಯಾವಾಗಲೂ ಹೀಗೆ ವ್ಯವಸ್ಥೆಯ ಪರವಾಗಿ ನಿಲ್ಲುತ್ತಾರೆ ಎಂದು ಹೇಳಿದರು.

ಇತ್ತೀಚಿನ ಪಠ್ಯಪುಸ್ತಕಗಳಲ್ಲಿ ಶೇ. 40-50ರಷ್ಟು ಸುಳ್ಳು ಇತಿಹಾಸವನ್ನು ನಮ್ಮ ತಲೆಗೆ ತುಂಬುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಗತಿಪರರಾಗಿರುವುದರಿಂದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

SCROLL FOR NEXT