ನವದೆಹಲಿ: ಪಾಕಿಸ್ತಾನದ ಐಎಸ್ಐ ನೊಂದಿಗೆ ಸಂಪರ್ಕ ಹೊಂದಿ ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯೋಬ್ಬರನ್ನು ದೆಹಲಿ ಪೊಲೀಸರು ಪಂಜಾಬ್ ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಂಜಿತ್ ಎಂದು ಗುರುತಿಸಲಾಗಿದ್ದು, ಈ ಮೂಲಕ ಪಾಕ್ ಪರ ಬೇಹುಗಾರಿಕೆ ನಡೆಸಿ ಬಂಧನಕ್ಕೊಳಗಾದ ವ್ಯಕ್ತಿಗಳ ಸಂಖ್ಯೆ 5 ಕ್ಕೇರಿದೆ. ಇದೇ ಆರೋಪದ ಮೇಲೆ ಡಿ.5 ರಂದು ಜಮ್ಮು-ಕಾಶ್ಮೀರದಲ್ಲಿ ದೆಹಲಿ ಪೊಲೀಸರು ಶಾಲಾ ಶಿಕ್ಷಕರೊಬ್ಬರನ್ನು ಬಂಧಿಸಿದ್ದರು. ಇದಕ್ಕೂ ಮುನ್ನ ನ.26 ರಂದು ಭೋಪಾಲ್ ನಲ್ಲಿ ಮತ್ತೋರ್ವ ಐಎಸ್ಐ ಗೂಢಚಾರನನ್ನು ಬಂಧಿಸಲಾಗಿತ್ತು.
ನಂತರದ ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಿಎಸ್ಎಫ್ ಮುಖ್ಯ ಪೇದೆ ಅದ್ಬುಲ್ ರಶೀದ್ ನನ್ನು ಬಂಧಿಸಲಾಗಿತ್ತು. ಪ್ರಸ್ತುತ ಬಂಧನಕ್ಕೊಳಗಾಗಿರುವ ವಾಯುಪಡೆಯ ಅಧಿಕಾರಿ ಕೇರಳದ ಮೂಲದವರಾಗಿದ್ದು ವಾಯುಪಡೆಯಿಂದ ವಜಾಗೊಳಿಸಲಾಗಿದೆ. ಬಂಧಿತನನ್ನು ಪಟಿಯಾಲ ಹೌಸ್ ಕೋರ್ಟ್ ಎದುರು ಹಾಜರುಪಡಿಸಲಾಗುತ್ತದೆ.