ಅಗ್ರಿಗೋಲ್ಡ್ ಆಸ್ತಿ ಹರಾಜಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿರುವ ಅಗ್ರಿಗೋಲ್ಡ್ ಕಂಪೆನಿಯ ಆಸ್ತಿ ಹರಾಜು ಮಾಡಲು ಹೈದರಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಹೈದರಾಬಾದ್: ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿರುವ ಅಗ್ರಿಗೋಲ್ಡ್ ಕಂಪೆನಿಯ ಆಸ್ತಿ ಹರಾಜು ಮಾಡಲು ಹೈದರಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಸರ್ಕಾರ ಮುಟ್ಟುಗೋಲು ಹಾಕಿರುವ 3,500 ಕೋಟಿ ರೂಪಾಯಿ ಮೌಲ್ಯದ ಖಾಲಿ ಜಾಗಕಟ್ಟಡಗಳು ಮತ್ತು ಇತರ ಆಸ್ತಿಯನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಲು ಕೋರ್ಟ್ ಆದೇಶ ನೀಡಿದೆ.
ಆಂಧ್ರ ,ಕರ್ನಾಟಕ ಮತ್ತು ತಮಿಳುನಾಡಿನಲ್ಲಿರುವ ಅಗ್ರಿಗೋಲ್ಡ್ ಕಂಪೆನಿಯ ಆಸ್ತಿಯ ಇ- ಹರಾಜು ಪ್ರಕ್ರಿಯೆ ಫೆಬ್ರವರಿ 10 ರಿಂದ ನಡೆಸಬೇಕಾಗಿದೆ. ಇ- ಹರಾಜಿನ ಹೊಣೆಯನ್ನು 3 ಕಂಪೆನಿಗಳಾದ ಎಂಎನ್ಪಿಸಿ, ವಿ ಆಕ್ಷನ್ ಪ್ರೈ .ಲಿ. ಮತ್ತು ಶ್ರೀರಾಮ್ ಮಾಲ್ಸ್ ಪ್ರೈ .ಲಿ ಕಂಪೆನಿಗೆ ನೀಡಲಾಗಿದೆ.
25 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದ ಅಗ್ರಿ ಗೋಲ್ಡ್ ಸಂಸ್ಥೆ ಡಿಪಾಸಿಟ್, ಪಿಗ್ಮಿ ಸೇರಿದಂತೆ ಹಲವು ಯೋಜನೆಗಳನ್ನು ಎಜೆಂಟರುಗಳ ಮೂಲಕ ನಡೆಸಿ ಇದೀಗ ಪಾಪರ್ಚೀಟಿ ನೀಡಿ ಸಂಸ್ಥೆ ಬಾಗಿಲು ಮುಚ್ಚಿದೆ.
ಗ್ರಾಹಕರಿಗೆ 6.500 ಕೋಟಿ ಹಣ ನೀಡಬೇಕಾಗಿದೆ. ಆದರೆ ಪ್ರತಿನಿಧಿಗಳು ಮಾತ್ರ ಗ್ರಾಹಕರಿಗೆ ಹಣ ನೀಡಲಾಗದೇ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.