ನವದೆಹಲಿ: ರಾಷ್ಟ್ರೀಯ ಸಲಹಾ ಮಂಡಳಿಯ ಮಾಜಿ ಸದಸ್ಯರೊಬ್ಬರು ಕರೆನ್ಸಿ ನೋಟುಗಳಲ್ಲಿ ಬಿಆರ್ ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಫೋಟೋಗಳನ್ನು ಚಿತ್ರಿಸಬೇಕೆಂದು ಒತ್ತಾಯಿಸಿದ್ದಾರೆ.
1996ರ ನಂತರ ಎಲ್ಲ ನೋಟುಗಳಲ್ಲಿ ಗಾಂಧೀಜಿಯ ಫೋಟೋಗಳು ಅಚ್ಚಾಗಿವೆ. ಆದರೆ ಅಂಬೇಡ್ಕರ್ ಮತ್ತು ವಿವೇಕಾನಂದರ ಫೋಟೋ ಯಾಕಿಲ್ಲ ಎಂದು ಎನ್‌ಎಸಿ ಮಾಜಿ ಸದಸ್ಯ ನರೇಂದ್ರ ಜಾದವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದೇನೆ. ಅಮೆರಿಕ ಮತ್ತು ಬ್ರಿಟನ್ ನಲ್ಲಿ ಹಲವಾರು ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ಕರೆನ್ಸಿ ನೋಟುಗಳಲ್ಲಿ ಅಚ್ಚು ಹಾಕಲಾಗಿದೆ. ಹೀಗಿರುವಾಗ ಬಿ ಆರ್ ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಚಿತ್ರಗಳನ್ನು ಹಾಕುವುದು ಒಳ್ಳೆಯದು ಎಂದು ನರೇಂದ್ರ ಜಾದವ್ ಮೋದಿಯವರಿಗೆ ಸಲಹೆ ನೀಡಿದ್ದಾರೆ.