ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ 
ದೇಶ

ಅಶೋಕ್ ಖೇಮ್ಕಾಗೆ ಹೊಸ ವರ್ಷಕ್ಕೆ ಬಡ್ತಿಯ ಕೊಡುಗೆ

ಹರ್ಯಾಣ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾಗೆ ಹೊಸ ವರ್ಷದ ಕೊಡುಗೆಯಾಗಿ ಬಡ್ತಿ...

ಚಂಡೀಗಢ್: ಹರ್ಯಾಣ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾಗೆ ಹೊಸ ವರ್ಷದ ಕೊಡುಗೆಯಾಗಿ ಬಡ್ತಿ ನೀಡಿದೆ.

ಅವರನ್ನು ಹರ್ಯಾಣ ಸರ್ಕಾರದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಈ ಅಶೋಕ್ ಖೇಮ್ಕಾ ಮತ್ತಾರೂ ಅಲ್ಲ, ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾಗೆ ಸಂಬಂಧಿಸಿದ ಭೂಹಗರಣ ಸೇರಿದಂತೆ ಹಲವು ಹಗರಣ ಬಯಲಿಗೆಳೆದ ದಕ್ಷ ಅಧಿಕಾರಿ. ಇದರಿಂದಾಗಿಯೇ ಪ್ರಮುಖ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಸತತವಾಗಿ ವರ್ಗಾವಣೆ ಶಿಕ್ಷೆ ಅನುಭವಿಸಿದ್ದರು.

ರಾಬರ್ಟ್ ವಾದ್ರಾ ಹಾಗೂ ಡಿಎಲ್‌ಎಫ್ ಕಂಪೆನಿಗಳ ನಡುವೆ ಏರ್ಪಟ್ಟಿದ್ದ ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಭೂಮಿ ಪರಿವರ್ತನೆಯನ್ನು ಕೇಮ್ಕಾ ರದ್ದುಗೊಳಿಸಿದ್ದರು. ಇದರಿಂದಾಗಿ ವಾದ್ರಾ ಅವರ ಭೂ ಹಗರಣ ಬೆಳಕಿಗೆ ಬಂದಿತ್ತು. ಈ ವಿಚಾರದಲ್ಲಿ ಖೇಮ್ಕಾ ಅವರು ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿದ್ದಾರೆ ಎಂದು ಭೂಪಿಂದರ್‌ ಸಿಂಗ್‌ ಹೂಡಾ ನೇತೃತ್ವದ ಕಾಂಗ್ರೆಸ್‌ ಸರಕಾರ ದೋಷಾರೋಪ ಹೊರಿಸಿತ್ತು. ಇದೀಗ ಈ ಆರೋಪಪಟ್ಟಿಯನ್ನು ಹಾಲಿ ಮುಖ್ಯಮಂತ್ರಿ ಮನೋಹರ ಲಾಲ್‌ ಕಟ್ಟರ್‌ ಅವರ ನಿರ್ದೇಶನದ ಮೇರೆಗೆ ಕೈಬಿಡಲಾಗಿತ್ತು. ಇದರಿಂದಾಗಿ ಖೇಮ್ಕಾ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಶ್ರೀಲಂಕಾ ವಿರುದ್ಧ 165 ರನ್ ಗಳಿಂದ ಗೆಲುವು: WTC ಪಾಯಿಂಟ್ ಪಟ್ಟಿಯಲ್ಲಿ ಭಾರತದ ಸ್ಥಾನ ಬದಲಾವಣೆ ಆಯ್ತಾ?

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!

ದಾವಣಗೆರೆ-ಹರಿಹರ ಅವಳಿ ನಗರ ಅಭಿವೃದ್ಧಿಗೆ 'ಮಾಸ್ಟರ್ ಪ್ಲಾನ್ 2041' ಕ್ಕೆ ಸರ್ಕಾರದ ಅನುಮೋದನೆ!