ನವದೆಹಲಿ: ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ದಿನದಿಂದಲೂ ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಸೋಮವಾರ ಬಹಿರಂಗವಾಗಿ ಸ್ಫೋಟಗೊಂಡಿದೆ.
ಚುನಾವಣೆಗೆ ಕೇವಲು ಐದು ದಿನ ಬಾಕಿ ಇರುವಾಗಲೇ ಕಿರಣ್ ಬೇಡಿ ಅವರ ಸರ್ವಾಧಿಕಾರಿ ಧೋರಣೆಗೆ ಬೇಸತ್ತು ದೆಹಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಹಾಗೂ ಬೇಡಿ ಅವರ ಕಾರ್ಯಕ್ರಮ ಸಂಯೋಜಕ ನರೇಂದ್ರ ಟಂಡನ್ ಅವರು ಇಂದು ಬಿಜೆಪಿಯಲ್ಲಿನ ತಮ್ಮ ಎಲ್ಲಾ ಸ್ಥಾನಗಳಿಗೂ ರಾಜಿನಾಮೆ ನೀಡಿದ್ದಾರೆ.
ಕಿರಣ್ ಬೇಡಿ ಅವರು ಎಲ್ಲರ ಮೇಲೂ ಅಧಿಕಾರ ಚಲಾಯಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟಂಡನ್ ಆರೋಪಿಸಿದ್ದಾರೆ.