ದೇಶ

ಟ್ರಾನ್ಸ್ಏಷ್ಯಾ ವಿಮಾನ ಪತನ: 23ಕ್ಕೇರಿದ ಸಾವಿನ ಸಂಖ್ಯೆ

Vishwanath S

ತೈಪೆ: 58 ಪ್ರಯಾಣಿಕರನ್ನು ಹೊತ್ತ ಟ್ರಾನ್ಸ್ಏಷ್ಯಾ ವಿಮಾನ ಪತನದಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೇ ಏರಿಕೆಯಾಗಿದೆ.

ತೈವಾನ್ ರಾಜಧಾನಿ ತೈಪೆ ನಗರ ಹೊರವಲಯದಲ್ಲಿ ಈ ಘಟನೆ ಸಂಭವಿಸಿತ್ತು. ಈ ದುರಂತದಲ್ಲಿ 23 ಪ್ರಯಾಣಿಕರು ಸಾವನ್ನಪ್ಪಿದ್ದು, ವಿಮಾನದಲ್ಲಿ ಸಿಲುಕಿದ್ದವರಲ್ಲಿ ಇಲ್ಲಿಯವರೆಗೂ 15 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಉಳಿದಂತೆ 20 ಮಂದಿ ಕಾಣೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ದೇಶಿಯ ಹಾರಾಟದಲ್ಲಿದ್ದ ಟ್ರಾನ್ಸ್ಏಷ್ಯಾ ಎಟಿಆರ್‌ 72600 ವಿಮಾನವು ನದಿಗೆ ಉರುಳುವ ಮುನ್ನ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ತೈಪೆ ನಗರದ ಸಾಂಗ್ಶಾನ್‌ ವಿಮಾನ ನಿಲ್ದಾಣದಿಂದ ಕಿನ್‌ಮೆನ್‌ ದ್ವೀಪಕ್ಕೆ ಪ್ರಯಾಣಿಸುತ್ತಿದ್ದ ವಿಮಾನವು ಟೇಕ್‌ಆಫ್ ಆದ ಕೆಲವು ನಿಮಿಷಗಳ ಬಳಿಕ ದುರಂತಕ್ಕೀಡಾಗಿದೆ ಎಂದು ವರದಿಗಳು ಹೇಳಿವೆ.

ವಿಮಾನದಲ್ಲಿ ಸಿಲುಕಿರುವ ಪ್ರಯಾಣಿಕರ ನೆರವಿನ ಕಾರ್ಯದಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ. ಕಳೆದ ಜುಲೈನಲ್ಲಿ ಟ್ರಾನ್ಸ್‌ಏಷ್ಯಾ ವಿಮಾನ ಪತನಗೊಂಡು 48 ಜನರು ಸಾವನ್ನಪ್ಪಿದ್ದರು.

SCROLL FOR NEXT