ದೇಶ

ಟಿಎಂಸಿ ಸಂಸದ ಶ್ರಿಂಜಾಯ್ ಬೋಸ್ ರಾಜಿನಾಮೆ

Vishwanath S

ನವದೆಹಲಿ: ಬಹುಕೋಟಿ ಶಾರದ ಗ್ರೂಪ್ ಚಿಟ್ ಫಂಡ್ ಹಗರಣ ಸಂಬಂಧ ಬಂಧನಕ್ಕೀಡಾಗಿ ಶರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದ ಶ್ರಿಂಜಾಯ್ ಬೋಸ್ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಸದ್ಯ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನೀಡಿರುವ ಅವರು, ಟಿಎಂಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ.

ಪ್ರಕರಣ ಸಂಬಂಧ ಕಳೆದ ನವೆಂಬರ್ 21ರಂದು ಸಿಬಿಐ ಅಧಿಕಾರಿಗಳು ಶ್ರಿಂಜಾಯ್ ಬೋಸ್ ರನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ಜಾಮೀನು ಕೋರಿ ಅಲಿಪೋರ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಶ್ರಿಂಜಾಯ್ ಬೋಸ್ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಮೂರು ಷರತ್ತುಗಳು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ಕೋರ್ಟ್ ಷರತ್ತಿನಂತೆ ಶ್ರಿಂಜಾಯ್ ಬೋಸ್ ದೇಶ ಬಿಟ್ಟು ಹೋಗುವಂತಿಲ್ಲ. ಸಾಕ್ಷಿಗಳನ್ನು ಬೆದರಿಸುವಂತಿಲ್ಲ ಹಾಗೂ ಸಿಬಿಐ ವಿಚಾರಣೆಗೆ ಹಾಜರಾಗಬೇಕಿದೆ.

ಬಹುಕೋಟಿ ಶಾರದಾ ಚಿಟ್ ಫಂಡ್ ಪ್ರಕರಣ ಭಾಗಿಯಾಗಿರುವ ಸಂಶಯದ ಮೇಲೆ ಸಿಬಿಐ ಅಧಿಕಾರಿಗಳು ಶ್ರಿಂಜಾಯ್ ಬೋಸ್ ರನ್ನು ಬಂಧಿಸಿ ವಿಚಾರಣಗೊಳಪಡಿಸಿದ್ದರು.

SCROLL FOR NEXT