ದೇಶ

ಭಾಲಚಂದ್ರ ನೇಮಾಡೆಗೆ ಜ್ಞಾನಪೀಠ ಗೌರವ

Rashmi Kasaragodu

ಮುಂಬೈ: ಖ್ಯಾತ ಮರಾಠಿ ಸಾಹಿತಿ ಭಾಲಚಂದ್ರ ನೇಮಾಡೆ ಅವರು ತಮ್ಮ `ಕೋಸಲಾ' (ರೇಷ್ಮೆ) ಕಾದಂಬರಿಗಾಗಿ 2014ನೇ ಸಾಲಿನ  ಜ್ಞಾನಪೀಠ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. 1963ರಲ್ಲಿ ರಚನೆಯಾಗಿದ್ದ ಈ ಕಾದಂಬರಿ ಮರಾಠಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮವನ್ನೇ ಹುಟ್ಟುಹಾಕಿತ್ತು. ಈ ಕಾರಣದಿಂದ ಅವರಿಗೆ ಭಾರತದ ಅತ್ಯುನ್ನತ ಸಾಹಿತ್ಯ ಗೌರವ ಸಂದಿದೆ. ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿರುವ 50ನೇ ಪುರಸ್ಕೃತರು ಇವರಾಗಿದ್ದಾರೆ. ಖ್ಯಾತ ವಿದ್ವಾಂಸ, ಲೇಖಕ ಹಾಗೂ ವಿಮರ್ಶಕರಾಗಿರುವ ಫ್ರೊ  ನಮ್ ವಾರ್ಸಿಂಗ್ ನೇತೃತ್ವದ 10 ಮಂದಿ ಸದಸ್ಯರ ಸಮಿತಿಯು 76 ವರ್ಷದ ನೇಮಾಡೆ ಅವರನ್ನು ಪ್ರಶಸ್ತಿಗೆ ಆಯ್ಕೆ  ಮಾಡಿದೆ.ಏಪ್ರಿಲ್ನಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಜ್ಞಾನಪೀಠ ಪ್ರಶಸ್ತಿಯ ನಿರ್ದೇಶಕ ಲೀಲಾಧರ್ ಮಾಂಡ್ಲೋಯಿ ಹೇಳಿದ್ದಾರೆ.

SCROLL FOR NEXT